Monday, 31 October 2016

ಭಾರತದ ಅರಣ್ಯ

 📚✍ PSI preparation Group✍📚
ಬಸವರಾಜ್ ಸರ್
(ಉಪನ್ಯಾಸಕರು ಬರಹಗಾರರು)

📚✍ಭಾರತದ ಅರಣ್ಯಗಳ✍📚

ಭಾರತವು 2009 ರ ಅಂದಾಜಿನಂತೆ 6.9 ಲಕ್ಷ ಚ.ಕಿ.ಮೀ (69.0 ದ.ಲ.ಹೇ) ಅಂದರೇ ಭೌಗೋಳಿಕ ಕ್ಷೇತ್ರದ ಶೇ 21.02 ರಷ್ಟು ಭೂಭಾಗವು ಅರಣ್ಯಗಳಿಂದ ಕೂಡಿದೆ

"ಭಾರತದ ಅರಣ್ಯ ಪ್ರದೇಶವನ್ನು ಮುಖ್ಯವಾಗಿ 6 ಪ್ರಕಾರಗಳಾಗಿ ವಿಂಗಡಿಸಬಹುದಾಗಿದೆ."


➡ ಅವುಗಳೆಂದರೇ



👉🏾1) ನಿತ್ಯಹರಿದ್ವರ್ಣದ ಅರಣ್ಯಗಳು:-

# ಭಾರತದಲ್ಲಿ ನಿತ್ಯಹರಿದ್ವರ್ಣದ ಅರಣ್ಯಗಳನ್ನು 250 ಸೆಂ.ಮೀ ಗಳಿಗಿಂತ ಹೆಚ್ಚು ಮಳೆ ಪಡೆಯುವ 900 ಮೀ. ಗಳಿಗಿಂತ ಕಡಿಮೆ ಎತ್ತರವನ್ನು ಹೊಂದಿರುವ ಪ್ರದೇಶಗಳಲ್ಲಿ ಕಾಣಬಹುದಾಗಿದೆ.

# ಈ ಬಗೆಯ ಅರಣ್ಯಗಳು ಪಶ್ಚಿಮ ಘಟ್ಟಗಳು, ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ತ್ರಿಪುರಾ, ಮಣಿಪುರ, ನಾಗಾಲ್ಯಾಂಡ್ ಹಾಗೂ ಅಂಡಮಾನ್ ನಿಕೋಬಾರ್ ಮತ್ತು ಲಕ್ಷದ್ವೀಪಗಳಲ್ಲಿ ಕಂಡುಬರುತ್ತದೆ.

# ಭಾರತದಲ್ಲಿ ನಿತ್ಯಹರಿದ್ವರ್ಣದ ಅರಣ್ಯಗಳು ಸುಮಾರು 2.6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹರಡಿವೆ. ಈ ಪ್ರದೇಶದಲ್ಲಿ ಸಸ್ಯವರ್ಗವು ವರ್ಷವೆಲ್ಲಾ ಹಸಿರಾಗಿರುವುದರಿಂದ ಇವುಗಳನ್ನು ನಿತ್ಯಹರಿದ್ವರ್ಣದ ಅಥವಾ ಸದಾ ಹಚ್ಚ ಹಸಿರಾಗಿರುವ ಅರಣ್ಯವೆಂದು ಕರೆಯುವರು.



👉🏾2) ಎಲೆಯುದುರುವ ಮಾನ್ಸೂನ್ ಅರಣ್ಯಗಳು:-

# ಈ ಪ್ರಕಾರದ ಅರಣ್ಯಗಳು ಭಾರತದಲ್ಲಿ ಅತಿ ಹೆಚ್ಚು ವಿಸ್ತಾರವಾಗಿ ಹರಡಿವೆ. ಇವುಗಳು 75 ರಿಂದ 250 ಸೆಂ.ಮೀ ಮಳೆ ಪಡೆಯುವ ಪ್ರದೇಶಗಳಲ್ಲಿ ವ್ಯಾಪಕವಾಗಿ ವಿಸ್ತರಿಸಿದೆ.

# ಇದು ಭಾರತದ ಶೇ. 65.5 ರಷ್ಟು ಒಟ್ಟು ಅರಣ್ಯದಲ್ಲಿ ಹರಡಿವೆ. ಇವುಗಳು ವರ್ಷದ ನಿರ್ದಿಷ್ಟ ಒಣ ಹವೆಯ ಋತುವಿನಲ್ಲಿ ಎಲೆಯನ್ನು ಉದುರಿಸುವುದನ್ನು ರೂಢಿಸಿಕೊಂಡಿರುವುದರಿಂದ ಇವುಗಳನ್ನು ಎಲೆಯುದುರಿಸುವ ಮಾನ್ಸೂನ್ ಅರಣ್ಯಗಳೆಂದು ಕರೆಯುವರು.



👉🏾3) ಉಷ್ಣವಲಯದ ಹುಲ್ಲುಗಾವಲು ಅರಣ್ಯ:-

# ಭಾರತದಲ್ಲಿ 60 ರಿಂದ 75 ಸೆಂ.ಮೀ ಮಳೆ ಪಡೆಯುವ ಪ್ರದೇಶಗಳಲ್ಲಿ ಹುಲ್ಲುಗಾವಲು ಸಸ್ಯವರ್ಗ ಪ್ರಧಾನವಾಗಿ ಕಂಡುಬರುವುದು.

# ಈ ವಲಯಗಳಲ್ಲಿ ಎತ್ತರವಾದ ಹುಲ್ಲು ಹಾಗೂ ವಿರಳವಾಗಿ ಅಲ್ಲಲ್ಲಿ ಕುರುಚಲ ಜಾತಿಯ ಸಸ್ಯವರ್ಗಗಳನ್ನು ಕಾಣಬಹುದು.

# ದಖನ್ ಪ್ರಸ್ಥಭೂಮಿಯ ಕೇಂದ್ರಭಾಗ, ಅರಾವಳಿ ಪರ್ವತಗಳ ಪಶ್ಚಿಮದಲ್ಲಿರುವ ಥಾರ್ ಮರುಭೂಮಿಯ ಅಂಚಿನ ವಲಯಗಳು ಈ ಬಗೆಯ ಸಸ್ಯವರ್ಗವನ್ನು ಹೊಂದಿವೆ.

# ಬಬೂಲ್, ಶಿಷಮ್, ಸಭಾಯ್ ಹುಲ್ಲು ಇತ್ಯಾದಿ ಇಲ್ಲಿ ಬೆಳೆಯುತ್ತವೆ.


👉🏾4) ಮ್ಯಾಂಗ್ರೋವ್ ಅರಣ್ಯಗಳು:-

# ಈ ಕಾಡುಗಳು ನದಿ ಮುಖಜ ಭೂಮಿಗಳು ಮತ್ತು ನದಿ ಅಳಿವೆಗಳ ತಗ್ಗು ಪ್ರದೇಶಗಳಲ್ಲಿ ಕಂಡುಬರುತ್ತವೆ.

# ಗಂಗಾ, ಮಹಾನದಿ, ಗೋದಾವರಿ, ಕೃಷ್ಣಾನದಿ ಮುಖಜಭೂಮಿಯಲ್ಲಿ ಕಂಡುಬರುತ್ತವೆ.

# ಗಂಗಾ ನದಿಯ ಮುಖಜ ಭೂಮಿಯಲ್ಲಿ ಸುಂದರಿ ಮರಗಳು ಹೇರಳವಾಗಿರುವುದರಿಂದ ಈ ಪ್ರದೇಶವನ್ನು ಸುಂದರಬನ್ ಎಂದು ಕರೆಯುತ್ತಾರೆ.

# ಈ ಅರಣ್ಯಗಳ ಕ್ಷೇತ್ರ ದೇಶದಲ್ಲಿ 4.4 ಸಾವಿರ ಚ.ಕಿ.ಮೀ ರಷ್ಟಿರುವುದು.



👉🏾5) ಮರುಭೂಮಿ ಅರಣ್ಯಗಳು:-

# ಈ ಅರಣ್ಯಗಳು ಸಾಮಾನ್ಯವಾಗಿ ವಾರ್ಷಿಕ 50 ಸೆಂ.ಮೀ ಗಿಂತಲೂ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಕಂಡುಬರುತ್ತವೆ.

# ರಾಜಸ್ಥಾನದ ಥಾರ್ ಮರುಭೂಮಿ ಅದಕ್ಕೆ ಹೊಂದಿಕೊಂಡ ಪಂಜಾಬ್, ಹರಿಯಾಣ ಮತ್ತು ಗುಜರಾತ್ ರಾಜ್ಯಗಳ ಕೆಲವು ಭಾಗಗಳಲ್ಲಿ ಈ ಅರಣ್ಯಗಳಿವೆ.

# ಈ ಸಸ್ಯವರ್ಗಗಳು ಆಳವಾಗಿ ಬೇರುಗಳನ್ನು ಹೊಂದಿದ್ದು ಕುರುಚಲು ಜಾತಿಯ ಸಸ್ಯವರ್ಗಗಳು ಮುಳ್ಳು ಕಂಟಿಗಳಿಂದ ಕೂಡಿರುತ್ತವೆ.



👉🏾6) ಹಿಮಾಲಯದ ಅಲ್ಪೈನ್ ಅರಣ್ಯಗಳು:-

# ಹಿಮಾಲಯ ಪರ್ವತಗಳಲ್ಲಿ ವಿವಿಧ ಬಗೆಯ ಅರಣ್ಯಗಳು ಕಂಡುಬರುತ್ತವೆ. ಏಕೆಂದರೆ ಎತ್ತರವು ಹೆಚ್ಚಿದಂತೆ ಉಷ್ಣವಲಯದಿಂದ ಧ್ರುವ ಪ್ರದೇಶದವರೆಗಿನ ವಾಯುಗುಣಗಳನ್ನು ಈ ಪರ್ವತಗಳಲ್ಲಿ ಕಾಣಬಹುದು.

# ವಾಯುಗುಣಕ್ಕೆ ಅನುಗುಣವಾಗಿ ವಿವಿಧ ಪ್ರಕಾರದ ಸಸ್ಯವರ್ಗಗಳು ಇಲ್ಲಿ ಕಂಡುಬರುವವು.

# ಇಲ್ಲಿ ಬೆಳೆಯುವ ಮುಖ್ಯ ಮರಗಳೆಂದರೇ - ಸಾಲ್, ಬೈರಾ, ಟೂನ್, ಸಿಲ್ವರ್, ಸ್ಟ್ರೂಸ್, ಲಾರೆಲ್ ಮುಂತಾದ ಎಲೆ ಮೊನಚಾದ ಅರಣ್ಯಗಳು ಪ್ರಧಾನವಾಗಿ ಬೆಳೆದಿರುತ್ತವೆ



✍ಭಾರತದ ಸ್ವಾಭಾವಿಕ ಲಕ್ಷಣಗಳು (Physical Features of India)✍

ನಮ್ಮ ಭಾರತ ದೇಶವು ಭೌಗೋಳಿಕ ವೈವಿಧ್ಯತೆಯ ದೇಶವಾಗಿದೆ. ಭೌಗೋಳಿಕ ಲಕ್ಷಣಗಳ ಆಧಾರದ ಮೇಲೆ ಭಾರತ ದೇಶವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ.

👉🏾ಉತ್ತರದ ಪರ್ವತಗಳು (The Northern Mountain)
ಉತ್ತರ ಭಾರತದ ಮಹಾ

👉🏾ಮೈದಾನ (The Northern Indian Plains)

👉🏾ಪರ್ಯಾಯ ಪ್ರಸ್ಥಭೂಮಿ (The Peninsular Plateau)

👉🏾ಕರಾವಳಿ ಪ್ರದೇಶಗಳು (The Coastal Regions)


👉🏾ಉತ್ತರದ ಪರ್ವತಗಳು

ಭಾರತದ ಈಶಾನ್ಯ ಮತ್ತು ಉತ್ತರ ದಿಕ್ಕಿನ ಭಾಗಗಳಲ್ಲಿ ವಿಭಿನ್ನ ಪರ್ವತ ಶ್ರೇಣಿಗಳನ್ನು, ಹಿಮಾಲಯ ಪರ್ವತ ಶ್ರೇಣಿಗಳನ್ನು, ಆಳವಾದ ಕಣಿವೆಗಳನ್ನು ಮತ್ತು ಹಿಮನದಿಗಳನ್ನು ಕಾಣಬಹುದು.

ಹಿಮಾಲಯ ಪರ್ವತ ಶ್ರೇಣಿಯು "ಪಾಮಿರ್ ಗ್ರಂಥಿ"ಯಿಂದ ಆರಂಭವಾಗಿ ಪೂರ್ವ ಭಾಗದಲ್ಲಿ "ನಾಗಾಲ್ಯಾಂಡ್" ವರೆಗೂ (ಸುಮಾರು 2500km ಉದ್ದ) ಹರಡಿದೆ. ಹಿಮಾಲಯ ಪರ್ವತ ಶ್ರೇಣಿಗಳು 'ಅಂಗಾರ' ಮತ್ತು 'ಗೊಂಡ್ವಾನ' ಭೂರಾಶಿಗಳ ಒತ್ತರಿಸುವಿಕೆಯಿಂದ ವಿವಿಧ ಕಾಲಾವಧಿಯಲ್ಲಿ ನಿರ್ಮಾಣಗೊಂಡಿವೆ. ಈ ಮಡಿಕೆ ಪರ್ವತ ಶ್ರೇಣಿಯಲ್ಲಿ ಮೂರು ಸಮಾನಾಂತರವಾದ ಶ್ರೇಣಿಗಳನ್ನು ಕಾಣಬಹುದು.

ಅವುಗಳೆಂದರೆ :

➡ ಮಹಾ ಹಿಮಾಲಯ

➡ ಮಧ್ಯ ಹಿಮಾಲಯ

➡ ಸಿವಾಲಿಕ್ ಬೆಟ್ಟಗಳು

👉🏾ಮಹಾ ಹಿಮಾಲಯ

# ಇದು ಹಿಮಾಲಯ ಪರ್ವತಗಳಲ್ಲಿ ಅತ್ಯಂತ ಎತ್ತರದ ಶ್ರೇಣಿಯಾಗಿದೆ.

# ಇದು ಪಶ್ಚಿಮದಲ್ಲಿ 'ನಂಗಾಪರ್ವತ' ದಿಂದ ಪೂರ್ವದಲ್ಲಿ 'ನಾಮಚಬರ್ವಾ' ಶಿಖರದ ವರೆಗೂ ಹರಡಿಕೊಂಡಿದೆ.

# ಸಮುದ್ರ ಮಟ್ಟದಿಂದ ಸರಾಸರಿ ಸುಮಾರು 6,000 ಮೀಟರ್ ಎತ್ತರದಲ್ಲಿದೆ.

# ಈ ಶ್ರೇಣಿಯು ಸದಾಕಾಲ ಹಿಮದಿಂದ ಆವೃತವಾಗಿರುವ ಕಾರಣದಿಂದ ಇದನ್ನು "ಹಿಮಾದ್ರಿ" ಎನ್ನುವರು.

# ಪ್ರಪಂಚದ ಅತ್ಯಂತ ಎತ್ತರವಾದ ಶಿಖರ 'ಮೌಂಟ್ ಎವರೆಸ್ಟ್' ನೇಪಾಳ ಮತ್ತು ಟಿಬೆಟ್ ಮಧ್ಯದಲ್ಲಿ ಕಾಣಬಹುದು.

# ಭಾರತದ ಅತ್ಯಂತ ಎತ್ತರವಾದ ಶಿಖರ ಕಾರಕೋರಂ ಶ್ರೇಣಿಯಲ್ಲಿರುವ "ಮೌಂಟ್ ಗಾಡ್ವಿನ್ ಆಸ್ಟಿನ್" ಅಥವಾ  "(K2)" .

# ಈ ಶ್ರೇಣಿಯ ಎತ್ತರವಾದ ಶಿಖರಗಳಿಗೆ ಉದಾ: ಕಾಂಚನ ಜುಂಗಾ, ಧವಳಗಿರಿ, ಮಾಕಲು, ನಂಗಾ ಪರ್ವತ, ನಂದಾದೇವಿ ಮತ್ತು ಗೌರಿ ಶಂಕರ.

# ಪ್ರಮುಖ ಹಿಮನದಿ 'ಗಂಗೋತ್ರಿ' (ಗಂಗಾ ನದಿಯ ಉಗಮ ಸ್ಥಾನವಾಗಿದೆ.)


👉🏾ಮಧ್ಯ ಹಿಮಾಲಯ

# ಈ ಶ್ರೇಣಿಯು ಸಮುದ್ರ ಮಟ್ಟದಿಂದ ಸುಮಾರು 3,600ಮೀಟರ್ ಗಳಿಂದ 4,500 ಮೀಟರ್ ಗಳಷ್ಟು ಎತ್ತರವಾಗಿದೆ.

# ಕೆಲವು ಶಿಖರಗಳು ಹಿಮದಿಂದ ಆವೃತವಾಗಿದೆ ಮತ್ತು ಉತ್ತರ ಭಾಗದಲ್ಲಿ ಅರಣ್ಯಗಳನ್ನು ಕಾಣಬಹುದು.

# ಇಲ್ಲಿ ಕಾಣಬಹುದಾದ ಪ್ರಮುಖ ಕಣಿವೆಗಳು ಕಾಂಗ್ರಾ, ಲಾಹುಲ್, ಕಾಶ್ಮೀರ ಕಣಿವೆ ಮತ್ತು ಕುಲು.

# ಪ್ರಮುಖ ಶ್ರೇಣಿಗಳಿಗೆ ಉದಾಹರಣೆ ಧವಲ್ ಧರ್, ಮಸ್ಸೂರಿ ಮತ್ತು ಪಿರ್ ಪಂಜಾಲ್.

# ನೈನಿತಾಲ್, ಡಾರ್ಜಲಿಂಗ್, ಸಿಮ್ಲಾ, ರಾಣಿಖೇತ್ ಮತ್ತು ಮಸ್ಸೂರಿ ಇಲ್ಲಿರುವ ಪ್ರಮುಖ ಗಿರಿಧಾಮಗಳು.


👉🏾ಶಿವಾಲಿಕ್ ಬೆಟ್ಟಗಳು

# ಶಿವಾಲಿಕ್ ಎಂಬುದು ಹಿಮಾಲಯದ ಹೊರವಲಯದಲ್ಲಿರುವ ಅತ್ಯಂತ ದಕ್ಷಿಣ ಭಾಗ.

# ಶಿವಾಲಿಕ್ ಬೆಟ್ಟಗಳನ್ನು 'ಹಿಮಾಲಯದ ಪಾದಬೆಟ್ಟ'ಗಳೆಂದು ಕರೆಯುತ್ತಾರೆ.

# ಈ ಶ್ರೇಣಿಯು ಹಿಮಾಲಯದಿಂದ ಹರಿದುಬರುವ ನದಿಗಳು ಹೊತ್ತುತಂದ ವಸ್ತುಗಳ ಸಂಚಯನದಿಂದ ನಿರ್ಮಾಣವಾಗಿದೆ.

# ಇದರ ಎತ್ತರ ಸುಮಾರು 1,300 ಮೀಟರ್ ಗಳು.

# ಇದರಲ್ಲಿ ಸಮತಟ್ಟಾದ ಹಾಗೂ ಕಿರಿದಾದ ಅನೇಕ ಮೈದಾನಗಳಿವೆ, ಇವುಗಳನ್ನು 'ಡೂನ್' ಗಳೆಂದು ಕರೆಯುತ್ತಾರೆ. ಉದಾ: ಡೆಹರಾಡೂನ್.
[

 ✍ಹಿಮಾಲಯದ ಎತ್ತರ ಐದು ಶಿಖರಗಳು

👉🏾ಶಿಖರ

👉🏾ದೇಶ

👉🏾ಎತ್ತರ (ಮೀ.)

1. ಮೌಂಟ್ ಎವರೆಸ್ಟ್ ನೇಪಾಳ - ಟಿಬೆಟ್ 8,848

2. ಗಾಡ್ವಿನ್ ಆಸ್ಟೀನ್ (K2) ಭಾರತ 8,611

3. ಕಾಂಚನ ಜುಂಗಾ ನೇಪಾಳ - ಭಾರತ 8,597

4. ಧವಳಗಿರಿ ನೇಪಾಳ 8,167

5. ನಂಗಾ ಪರ್ವತ ಭಾರತ 8,126
:


✍ಉತ್ತರ ಭಾರತದ ಮಹಾ ಮೈದಾನ

# ಈ ಮಹಾ ಮೈದಾನದ ಒಟ್ಟು ವಿಸ್ತೀರ್ಣ ಸುಮಾರು 6,52,000 ಚ.ಕಿ.ಮೀ. ಈ ಮೈದಾನದ ದಕ್ಷಿಣದ ಪರ್ಯಾಯ ಪ್ರಸ್ಥಭೂಮಿ ಮತ್ತು ಉತ್ತರಕ್ಕೆ ಹಿಮಾಲಯ ಪರ್ವತಗಳನ್ನು ಕಾಣಬಹುದು.

# ಉತ್ತರ ಭಾರತದ ನದಿಗಳು ಹೊತ್ತು ತಂದ ಮೆಕ್ಕಲು ಸಂಚಯನದಿಂದ ಈ ಮೈದಾನ ಪ್ರದೇಶ ನಿರ್ಮಾಣವಾಗಿದೆ.

# ಈ ಮೈದಾನ ಪ್ರದೇಶವನ್ನು 'ಗಂಗಾನದಿ ಬಯಲು ಪ್ರದೇಶ'ಎಂದು ಕರೆಯುತ್ತಾರೆ.

# ಮೆಕ್ಕಲು ಮಣ್ಣಿನಿಂದ ಆವೃತವಾಗಿರುವ ಈ ಮೈದಾನ ವ್ಯವಸಾಯಕ್ಕೆ ಯೋಗ್ಯವಾದ ಪ್ರದೇಶ.

# ಸಮತಟ್ಟಾದ ಭೂ ಪ್ರದೇಶ ಇರುವುದರಿಂದ ನೀರಾವರಿ ಕಾಲುವೆ ನಿರ್ಮಾಣಕ್ಕೆ ಅನುಕೂಲವಾಗಿದೆ. ಈ ಪ್ರದೇಶದಲ್ಲಿ ಭಾರತದ ಶೇ.40 ರಷ್ಟು ಜನರು ವಾಸಿಸುತ್ತಿದ್ದಾರೆ. ಇದನ್ನು "ಭಾರತದ ಹೃದಯ ಭಾಗ" ಎಂದು ಕರೆಯುತ್ತಾರೆ.



👉🏾ಪರ್ಯಾಯ ಪ್ರಸ್ಥಭೂಮಿ

# ಪರ್ಯಾಯ ಪ್ರಸ್ಥಭೂಮಿ ಅತ್ಯಂತ ಪ್ರಾಚೀನ ಮತ್ತು ಅತಿ ಕಠಿಣ ಶಿಲೆಗಳಿಂದ ನಿರ್ಮಾಣವಾಗಿದೆ.

# ಭಾರತದ ಭೂ ಸ್ವರೂಪದಲ್ಲಿ ಅತ್ಯಂತ ವಿಸ್ತಾರವಾಗಿ ಹರಡಿದೆ.

# ನರ್ಮದಾ ಸೀಳು ಕಣಿವೆಯು ಭಾರತದ ಪರ್ಯಾಯ ದ್ವೀಪವನ್ನು (ಪ್ರದೇಶವನ್ನು) 2 ಭಾಗಗಳಾಗಿ ವಿಂಗದಿಸಲಾಗಿದೆ. ಅವುಗಳೆಂದರೆ:

ಮಾಳ್ವಾ ಪ್ರಸ್ಥಭೂಮಿ
ದಖನ್ ಪ್ರಸ್ಥಭೂಮಿ


👉🏾ಮಾಳ್ವಾ ಪ್ರಸ್ಥಭೂಮಿ :

# ಮಾಳ್ವಾ ಪ್ರಸ್ಥಭೂಮಿಯ ದಕ್ಷಿಣ ಭಾಗದಲ್ಲಿ ವಿಂಧ್ಯ ಪರ್ವತಗಳು, ವಾಯುವ್ಯ ಭಾಗದಲ್ಲಿ ಅರಾವಳಿ ಬೆಟ್ಟಗಳನ್ನು ಹೊಂದಿವೆ. ಈಶಾನ್ಯದಲ್ಲಿ ಗಂಗಾ ಮೈದಾನದ ಕಡೆ ಇಳಿಜಾರಾಗಿದೆ.  ಇದು ತ್ರಿಭುಜಾಕೃತಿಯಲ್ಲಿದೆ.

# ಅರಾವಳಿ ಬೆಟ್ಟದಲ್ಲಿರುವ ಅತ್ಯಂತ ಎತ್ತರ ಶಿಖರ "ಗುರು ಶಿಖರ" ಅಥವಾ "ಪಳೆಯುಳಿಕೆ ಶಿಖರ".  "ಮೌಂಟ್ ಅಬು" ಈ ಬೆಟ್ಟಗಳ ಮೇಲಿನ ಪ್ರಸಿದ್ಧ ಗಿರಿಧಾಮ.

👉🏾ದಖನ್ ಪ್ರಸ್ಥಭೂಮಿ :

# ದಖನ್ ಪ್ರಸ್ಥಭೂಮಿ ಮೈಕಾಲ್ ಶ್ರೇಣಿ , ಅಮರಕಂಟಕ , ಸಾತ್ಪುರ್ ಬೆಟ್ಟಗಳು , ಮಹಾದೇವ ಬೆಟ್ಟಗಳು ಮತ್ತು ರಾಜ್ ಮಹಲ್ ಬೆಟ್ಟಗಳಿಂದ ಸುತ್ತುವರೆಯಲ್ಪಟ್ಟಿದೆ.

# ದಖನ್ ಪ್ರಸ್ಥಭೂಮಿ ಪಶ್ಚಿಮಕ್ಕೆ 'ಪಶ್ಚಿಮ ಘಟ್ಟಗಳಿವೆ' ಇವುಗಳನ್ನು"ಸಹ್ಯಾದ್ರಿ" ಎಂದು ಕರೆಯುತ್ತಾರೆ. ಹಾಗೆ ಕೇರಳ, ತಮಿಳುನಾಡಿನಲ್ಲಿರುವ ಶ್ರೇಣಿಗಳನ್ನು 'ಕಾರ್ಡ್ ಮಮ್, ನೀಲಗಿರಿ, ಅಣ್ಣಾಮಲೈ ಮತ್ತು ಪಳನಿ ಬೆಟ್ಟಗಳು' ಎನ್ನುವರು.

# ಅಣ್ಣಾಮಲೈ ಸರಣಿಯ "ಅನೈಮುಡಿ (2,695 ಮೀ.)"

 ದಕ್ಷಿಣ ಭಾರತದ ಅತಿ ಎತ್ತರವಾದ ಪ್ರದೇಶವಾಗಿದೆ. ✍ಕರಾವಳಿ ಪ್ರದೇಶಗಳು


# ಕರಾವಳಿ ಪ್ರದೇಶ  ಪಶ್ಚಿಮದಲ್ಲಿ ಗುಜರಾತ್ ನ "ಕಛ್"ನಿಂದ ಪೂರ್ವದಲ್ಲಿ ಗಂಗಾನದಿಯ ಮುಖಜ ಭೂಮಿಯವರೆಗೆ ಹಬ್ಬಿದೆ.

# ಭಾರತದ ಕರಾವಳಿಯ ಉದ್ದ6,100 ಕಿ.ಮೀ (ದ್ವೀಪಗಳನ್ನು ಹೊರತುಪಡಿಸಿ).

# ಭಾರತದ ಕರಾವಳಿಯನ್ನು 2 ಭಾಗಗಳಾಗಿ ವಿಂಗಡಿಸಲಾಗಿದೆ.

ಪೂರ್ವ ಕರಾವಳಿ
ಪಶ್ಚಿಮ ಕರಾವಳಿ


👉🏾ಪೂರ್ವ ಕರಾವಳಿ

# ಉತ್ತರದ ಗಂಗಾನದಿ ಮುಖಜ ಭೂಮಿಯಿಂದ ದಕ್ಷಿಣದ ಕನ್ಯಾಕುಮಾರಿ ಯವರೆಗೂ, ಬಂಗಾಳ ಕೊಲ್ಲಿ ಮತ್ತು ಪೂರ್ವ ಘಟ್ಟಗಳ ನಡುವೆ ಹರಡಿದೆ.

# ಪೂರ್ವ ಕರಾವಳಿ ಪ್ರದೇಶವು ಹೆಚ್ಚು ಅಗಲವಾಗಿ ಮತ್ತು ಒಂದೇ ರೀತಿ ಸಮತಟ್ಟಾಗಿದೆ.

# ಪೂರ್ವ ಕರಾವಳಿ ತೀರದಲ್ಲಿ ಸಮುದ್ರದ ಉಪ್ಪು ನೀರಿನಿಂದ ನಿರ್ಮಿತವಾದ ಕೆಲವು ಲಗೂನ್ (ಸರೋವರ)ಗಳಿವೆ. ಅಂತಹ ಲಗೂನ್ ಗಳಿಗೆ ಉದಾ: ತಮಿಳುನಾಡಿನ 'ಪುಲಿಕಾಟ್' ಮತ್ತು ಒರಿಸ್ಸಾದ 'ಚಿಲ್ಕಾ' ಸರೋವರಗಳು.

# ಚಿಲ್ಕಾ ಸರೋವರ ಭಾರತದ ಅತಿ ದೊಡ್ಡ ಸರೋವರವಾಗಿದೆ.

# ಆಂಧ್ರಪ್ರದೇಶದ ಬಳಿ ಇರುವ ಶ್ರೀ ಹರಿಕೋಟಾ ದ್ವೀಪದಲ್ಲಿ ಇಸ್ರೋ (ISRO)ದ ಕೃತಕ ಉಪಗ್ರಹ ಉಡಾವಣಾ ಕೇಂದ್ರವಿದೆ.

# ಪೂರ್ವ ಕರಾವಳಿಯ ಉತ್ತರ ಭಾಗವನ್ನು "ಉತ್ಕಲ ತೀರ" ಮತ್ತು ದಕ್ಷಿಣ ಭಾಗವನ್ನು "ಕೋರಮಂಡಲ ತೀರ" ವೆಂದು ಕರೆಯುತ್ತಾರೆ.

# ಪೂರ್ವ ಕರಾವಳಿಯಲ್ಲಿ ಕಾಣ ಬಹುದುದಾದ ಪ್ರಮುಖ ಬಂದರುಗಳು ಹೀಗಿವೆ : ಪಾರಾದೀಪ್, ಹಲ್ದಿಯಾ, ಕೋಲ್ಕತ್ತಾ, ವಿಶಾಖಪಟ್ಟಣ, ಚೆನ್ನೈ ಮತ್ತು ಟುಟಿಕಾರ್ನ್.



👉🏾ಪಶ್ಚಿಮ ಕರಾವಳಿ

# ಗುಜರಾತಿನ "ಕಛ್" ಪ್ರದೇಶದಿಂದ ಕನ್ಯಾಕುಮಾರಿ ಯವರೆಗೂ, ಅರಬ್ಬೀ ಸಮುದ್ರ ಮತ್ತು ಪಶ್ಚಿಮ ಘಟ್ಟಗಳ ಮಧ್ಯೆ ಹರಡಿದೆ.

# ಪಶ್ಚಿಮ ಕರಾವಳಿಯ ಉದ್ದ ಸುಮಾರು 1,500 ಕಿಲೋ ಮೀಟರ್ ನಷ್ಟಿದೆ.

# ಈ ಕರಾವಳಿ ಪ್ರದೇಶ ನೇರವಾಗಿ ರುವುದರಿಂದಲೂ, ವರ್ಷದ 6 ತಿಂಗಳು ಮಾನ್ಸೂನ್ ಮಾರುತಗಳಿಗೆ ಒಳಗಾಗುವುದರಿಂದ ಇಲ್ಲಿ ಸ್ವಾಭಾವಿಕ ಬಂದರುಗಳು ಕಡಿಮೆ ಪ್ರಮಾಣದಲ್ಲಿವೆ.

# ಪಶ್ಚಿಮ ಕರಾವಳಿಯನ್ನು ಮಲಬಾರ್ ತೀರ, ಕರ್ನಾಟಕ ಕರಾವಳಿ, ಕೊಂಕಣಿ ತೀರ, ಗುಜರಾತ್ ಕರಾವಳಿ, ಕಛ್ ಮತ್ತು ಕಾಟೇವಾಡ ಎಂಬ ಪರ್ಯಾಯ ದ್ವೀಪಗಳೆಂದು ವಿಭಾಗಿಸಲಾಗಿದೆ.

# ಅತಿ ಹೆಚ್ಚು ಕರಾವಳಿ ಪ್ರದೇಶ ಹೊಂದಿರುವ ರಾಜ್ಯ "ಗುಜರಾತ್".# ಅತಿ ಕಡಿಮೆ ಕರಾವಳಿ ಪ್ರದೇಶ ಹೊಂದಿರುವ ರಾಜ್ಯ "ಗೋವಾ".

# ಪಶ್ಚಿಮ ಕರಾವಳಿಯ ಪ್ರಮುಖ ಬಂದರುಗಳು,  ಮರ್ಮ ಗೋವಾ, ಕೊಚ್ಚಿ, ಕಾರವಾರ, ಮುಂಬಯಿ, ನವಶೇವ, ಮಂಗಳೂರು ಕಾಂಡ್ಲ .


✍ಕರಾವಳಿ ಪ್ರದೇಶದ ಉದ್ದ

👉🏾ರಾಜ್ಯಗಳು

👉🏾ಉದ್ದ

1. ಗುಜರಾತ್ ಕರಾವಳಿ ಉದ್ದ 1600 ಕಿ.ಮೀ

2. ಆಂಧ್ರಪ್ರದೇಶದ ಕರಾವಳಿ ಉದ್ದ 1000 ಕಿ.ಮೀ

3. ತಮಿಳುನಾಡು 910 ಕಿ.ಮೀ

4. ಮಹಾರಾಷ್ಟ್ರ 720 ಕಿ.ಮೀ

5. ಕೇರಳ 580 ಕಿ.ಮೀ

6. ಒರಿಸ್ಸಾ 480 ಕಿ.ಮೀ

7. ಪಶ್ಚಿಮ ಬಂಗಾಳ 350 ಕಿ.ಮೀ

8. ಕರ್ನಾಟಕ 320 ಕಿ.ಮೀ

9. ಗೋವಾ


👉🏾ಪೂರ್ವ ಕರಾವಳಿ ರಾಜ್ಯಗಳು :-

1.ಪಶ್ಚಿಮ ಬಂಗಾಳ

2.ಒರಿಸ್ಸಾ

3.ಆಂಧ್ರಪ್ರದೇಶ

4.ತಮಿಳುನಾಡು


👉🏾ಪಶ್ಚಿಮ ಕರಾವಳಿ ರಾಜ್ಯಗಳು :-

1.ಗುಜರಾತ್

2.ಮಹಾರಾಷ್ಟ್ರ

3.ಗೋವಾ

4.ಕರ್ನಾಟಕ

5.ಕೇರಳ

👉🏾ದ್ವೀಪಗಳು

# ಭಾರತಕ್ಕೆ ಸೇರಿದ 247ದ್ವೀಪಗಳಿವೆ.

# 247 ದ್ವೀಪಗಳಲ್ಲಿ 204 ದ್ವೀಪಗಳು ಬಂಗಾಳ ಕೊಲ್ಲಿಯಲ್ಲಿ ಮತ್ತು 43 ದ್ವೀಪಗಳು ಅರಬ್ಬಿ ಸಮುದ್ರದಲ್ಲಿವೆ.

# ಅಂಡಮಾನ್ & ನಿಕೋಬಾರ್ ದ್ವೀಪಗಳು ಗಟ್ಟಿಯಾದ ಜ್ವಾಲಾಮುಖಿ ನಿರ್ಮಿತ ಶಿಲೆಗಳಿಂದ ಕೂಡಿವೆ.

# ಲಕ್ಷದ್ವೀಪಗಳು ಹವಳಗಳಿಂದ ನಿರ್ಮಿತವಾಗಿವೆ.

Sunday, 30 October 2016

ಜ್ಞಾನ. ರಸಪ್ರಶ್ನೆ ಗ್ರುಪನಲ್ಲಿ ನಡೆದ ಕ್ವೀಜ್

ಕ್ವೀಜ್ ಸಂಯೋಜಕರು
Amasidda takali

Time :~
*[10/28, 8:01 PM]*


೧) ಹುಬ್ಬಳ್ಳಿಯಲ್ಲಿ ಹಿಂದುಸ್ಥಾನ ಸೇವಾ ದಳ ಸ್ಥಾಪಿಸಿದವರು ಇವರು?

ಅ) ಎನ್ ಎಸ್ ಹರ್ಡಿಕರ್✔
ಬ) ಎಚ್ ಆರ್ ದೇಶಪಾಂಡೆ
ಕ)ಜಿ.ಯಾಲಗಿ
ಡ) ಮೇಲಿನ ಯಾರು ಅಲ್ಲ


2) ಭಾರತದ ಏಕಿರಣ ಕಾರ್ಯದಲ್ಲಿ ಸರ್ದಾರ್ ಪಟೇಲ್ ರಿಗೆ ನಿಕಟವರ್ತಿಗಳಾಗಿದ್ದವರು ಇವರು? ?

ಅ) ಶಂಕರ ನಾಯರ್
ಬ) ವಿ.ಪಿ.ಮೇನನ್✔✔
ಕ) ಮಥಾಯಿ
ಡ) ಯಾರು ಅಲ್ಲ
*[10/28, 8:06 PM] amasiddatakali@gmail.com:*

 3) ದೇಶೀಯ ಭಾಷೆಗಳ ಪತ್ರಿಕಾ ಕಾಯ್ದೆ 1878 ರಲ್ಲಿ ಜಾರಿಗೆ ತಂದವರು? ??

ಅ) ಲಾರ್ಡ್ ಕರ್ಜನ
ಬ) ಲಾರ್ಡ್ ಡಾಲಹೌಸಿ
ಕ) ಲಾರ್ಡ ಲಿಟ್ಟನ್✔
ಡ) ಲಾರ್ಡ್ ರಿಪ್ಪನ್
*[10/28, 8:08 PM]*

4)ಪ್ರಸಿದ್ಧವಾದ ದಂಡಿ ಪಾದಯಾತ್ರೆಯಲ್ಲಿ ಗಾಂಧೀಜಿಯವರ ಜೊತೆ  ಭಾಗವಹಿಸಿದವರ ಸಂಖ್ಯೆ? ?
ಅ)78✔
ಬ)80
ಕ)76
ಡ) 75
*[10/28, 8:10 PM] amasiddatakali*


5) ಬ್ರಿಟಿಷರು ಗಾಂಧೀಜಿಯವರಿಗೆ ಕೈಸರ್ -ಇ-ಹಿಂದ್ ಗೌರವ ನೀಡಿದ್ದೇಕೆ??

ಅ) ದ.ಆಫ್ರಿಕಾ ಬಿಟ್ಟು ಬಂದಿದ್ದಕ್ಕೆ
ಬ) ದ.ಆಫ್ರಿಕಾದಲ್ಲಿ ಸತ್ಯಾಗ್ರಹ ನಡೆಸಿದ್ದಕ್ಕೆ
ಕ)ಅಸಹಕಾರ ಚಳುವಳಿ ನಿಲ್ಲಿಸಿದ್ದಕ್ಲೆ
ಡ) ಮೊದಲ ಮಹಾಯುದ್ಧದದಲ್ಲಿ ಬ್ರಿಟಿಷ್ ರಿಗೆ ಸಹಾಯ ಮಾಡಿದ್ದಕ್ಕೆ✔✔


6) ಸೈಮನ್ ಆಯೋಗ ಯಾಕೆ ವಿರೋಧಿಸಲಾಯಿತು ??

ಅ)ಜಲಿಯನ್ ವಾಲಬಾಗನಲ್ಲಿ ಬ್ರಿಟಿಷರು ತಳಿದ ನೀತಿಯಿಂದ
ಬ)ಇದರಲ್ಲಿ ಎಲ್ಲರೂ ಬಿಳಿಯರು ಇದ್ದರು✔
ಕ)ಅವರು ನಿರೀಕ್ಷೆ ಪ್ರಕಾರ ಕೆಲಸ ಮಾಡಲಿಲ್ಲ
ಡ) ಮೇಲಿನ ಯಾವುದೇ ಅಲ್ಲ



7) 1599 ರಲ್ಲಿ  ಭಾರತಕ್ಕೆ ಬಂದ ಮೊದಲ ಬ್ರಿಟಿಷ್ ವ್ಯಕಿ ಈತನು? ?
ಅ) ಹಾಕಿಂಕ್ಸ
ಬ) ಥಾಮಸ್ ರೊ
ಕ) ಜಾನ್ ಮಿಲ್ಟನ್ ಹಾಲ್✔
ಡ) ಮೇಲಿನ ಯಾರು ಅಲ್ಲ


 8) ಡೆನ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆ ಆಗಿದ್ದು? ??

ಅ)1602
ಬ)1620
ಕ)1616✔
ಡ)1600
 amasiddatakali

9) ಬ್ರಿಟಿಷರು ಕೊರಮಂಡಲ ತೀರವನ್ನು *ಕರ್ನಾಟಿಕಾ* ಎಂದು ಹೆಸರಿಸಿದರು,ಈ ಕರ್ನಾಟಿಕಾದ ರಾಜಧಾನಿ ಇದಾಗಿತ್ತು? ??
ಅ) ಪಾಂಡಿಚೆರಿ
ಬ)ಸೂರತ್
ಕ) ಕಲ್ಲಿಕೊಟೆ
ಡ) ಆರ್ಕಟ✔


10) ಕಲ್ಕತ್ತ ಕಪ್ಪು ಕೋಣೆ ದುರಂತ ನಡೆದಿದ್ದು? ??

ಅ) 1757 June 23
ಬ) 1657 June 23
ಕ)1756 June 23✔
ಡ)1760

11) 1799 may 04 ರಂದು ಟಿಪ್ಪು ಸುಲ್ತಾನನ್ನು ಕೊಲೆ ಮಾಡಿದವರು? ??

ಅ) ಹ್ಯಾರಿಸ್✔
ಬ)ವೆಲ್ಲೆಸ್ಲಿ
ಕ) ಸ್ಮಿತ್
ಡ)

12)ತಾತ್ಯಾ ಟೋಪಿಯನ್ನು ಗಲ್ಲಿಗೆರಿಸಿದ ಬ್ರಿಟಿಷ್ ಅಧಿಕಾರಿ??

ಅ)ಹೆಿನ್ರಿ
ಬ)ಕ್ಯಾಂಬೆಲ್✔ಲ
ಕ)ಹ್ಯಾಡ್ಸನ್
ಡ) ಯಾರು ಅಲ್ಲ

13)ಮುಸ್ಲಿಂ ಲೀಗ್ ಸ್ಥಾಪನೆ ಆಗಿದ್ದು? ?

ಅ)1617
ಬ)1907
ಕ)1906✔
ಡ)1905

14)1905 ಬ್ರಿಟಿಷ್ ವೈಸರಾಯ್ ಆಗಿದ್ದವರು ಇವರು? ?

ಅ) ಲಾರ್ಡ್ ಕರ್ಜನ್✔
ಬ) ಲಾರ್ಡ್ ಮೊಂಟೊ
ಕ) ಲಾರ್ಡ್ ಡಾಲ್ ಹೌದು
ಡ)ಲಾರ್ಡ್ ರಿಪ್ಪನ್

[10/28, 8:35 PM] amasiddatakali@gmail.com:

 15) ಮೊಗಲ್ ದೊರೆ *ಪರೊಕ್ಷಿಯಾರ್* ಬ್ರಿಟಿಷರಿಗೆ 1717 ರಲ್ಲಿ ಬಿಹಾರ,ಬಂಗಾಳ,ಒರಿಸ್ಸಾ ಗಳಲ್ಲಿ ಸುಲ್ಕ ರಹಿತ ವ್ಯಾಪಾರ ಮಾಡಲು ಅನುಮತಿ ನೀಡಿದ್ದರ ಕಾರಣ? ?

ಅ) ಬ್ರಿಟಿಷರು ಒತ್ತಾಯ ಮಾಡಿದ್ದರಿಂದ
ಬ) ಪರೊಕ್ಷಿಯಾರ್ ರೋಗವನ್ನು ಜಾನ್ ವಿಲಿಯಂ ಹ್ಯಾಮೆಟನ್ನ ಗುಣ ಪಡಿಸಿದರು ಇದರ ಸಂತೋಷದಿಂದ ✔

ಕ) ಬ್ರಿಟಿಷರ ಯುದ್ಧ ಮಾಡಿ ಒಪ್ಪಂದ ಮಾಡಿಕೊಂಡ ಕಾರಣ ಬಿಟ್ಟು ಕೊಡಬೇಕು ಆಯಿತು
ಡ) ಯಾವುದು ಅಲ್ಲ

16) ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆ ಯಾಗಿವಾಗ, ಅಂದಿನ ಫ್ರಾನ್ಸಿನ ಹಣಕಾಸು ಮಂತ್ರಿ ಇವರಾಗಿದ್ದರು? ?

ಅ) ಪ್ರಾಂಕಾಯಿಸ್
ಬ) ಜಿನಲಾ
ಕ) ಡುಪ್ಲೆ
ಡ)ಕ್ಲೊಬರ್ಟ✔✔

 17) 1754 ರಲ್ಲಿ ಎರಡನೆಯ ಕರ್ನಾಟಿಕಾ ಯುದ್ಧ ಪಾಂಡಿಚೆರಿ ಒಪ್ಪಂದದೊಂದಿಗೆ ಮುಕ್ತಾಯವಾತಿತು ಈ ಸಂದರ್ಭದಲ್ಲಿ ಫ್ರೆಂಚ್ ಗವರ್ನರ್ ಜನರಲ್ ಆಗಿದ್ದವರು??

ಅ) ಕೊಡೆಹೋ✔
ಬ)ಡುಪ್ಲೆ
ಕ) ಮಾರಿಸಸ್
ಡ) ಮೇಲಿನ ಯಾರು ಅಲ್ಲ


18) ಕ್ರಿಶ್ಚಿಯನ್ನರನ್ನು ಮತ್ತು ಸಾಂಬಾರ್ ಪದಾರ್ಥಗಳನ್ನು ಹುಡುಕಿಕೊಂಡು ತಾವು ಭಾರತಕ್ಕೆ ಹೊಗುತಿದ್ದೇವೆ ಎಂದು ಘೋಷಿಸಿದವರು ಇವರು? ???

ಅ) ಆಂಗ್ಲರು
ಬ)ಡಚ್ವರು
ಕ)ಫ್ರೆಂಚರು
ಡ) ಪೋರ್ಚುಗೀಸರು✔


19)  1946 ರಲ್ಲಿ ಕರ್ನಾಟಕದ ಏಕೀಕರಣ ಸಮಾವೇಶ ನಡೆದ ಸ್ಥಳ ಈ ಕೆಳಗಿನ ಯಾವುದು? ?

ಅ) ಬೆಂಗಳೂರು
ಬ) ಮುಂಬಯಿ✔✔
ಕ)ಮದ್ರಾಸ್
ಡ) ಮೈಸೂರು


20) ನ್ಯೂನಿಜ್ ಎಂಬ ಪೋರ್ಚುಗೀಸರ ಪ್ರವಾಸಿಗ ಇವನ ಆಳ್ವಿಕೆಯಲ್ಲಿ ವಿಜಯನಗರಕ್ಕೆ ಭೇಟಿ ಕೊಟ್ಟನು? ??

ಅ) ಅಚ್ಯತರಾಯ್..✔✔
ಬ)ಎರಡನೆಯ ದೇವರಾಯನ
ಕ) ಕೃಷ್ಣ ದೇವರಾಯನ
ಡ) ಮೇಲಿನ ಯಾರು ಅಲ್ಲ


21) ಬೆಂಗಳೂರು ಮೊಘಲರಿಂದ ಕೊಂಡ ಮೈಸೊರಿನ ದೊರೆ? ??

ಅ) ರಾಜ ಒಡೆಯರು
ಬ)ದೊಡ್ಡ ದೇವರಾಜ ಒಡೆಯರು
ಕ) ಚಿಕ್ಕ ದೇವರಾಜ ಒಡೆಯರು
ಡ)ಅಚುತರಾಯ್
[10/28, 8:57 PM] amasiddatakali@gmail.com: 22) ಭಾರತ ಮತ್ತು ಪಾಕಿಸ್ತಾನಗಳಾಗಿ ಭಾರತದ ವಿಭಜನೆ ಇದರ ಆದರದ ಮೇಲೆ ಆಯಿತು? ?

ಅ) ವೆವಲ್ ಯೋಜನೆ
ಬ) ರಾಡ್ ಕ್ಲಿಪ್ ಯೋಜನೆ✔✔
ಕ) ಬ್ಯಾಟನ್ ಯೋಜನೆ
ಡ) ಯಾವುದ ಅಲ್ಲ


23)  ಬ್ರಿಟಿಷರು ವಿರುದ್ಧ ಸತ್ಯಾಗ್ರಹ ನಡೆಸುವುದಕ್ಕೆ ಮೊದಲು ಒಂದು ವರ್ಷ ಕಾಲ ಬ್ರಿಟಿಷ್ ಭಾರತದಲ್ಲಿ ಪ್ರವಾಸ ಮಾಡಿ ಬರುವಂತೆ ಗಾಂಧೀಜಿಯವರಿಗೆ ತಿಳಿಸಿದವರು ಇವರು ? ??

ಅ) ತಿಲಕರ
ಬ)ಜಿನ್ನಾ
ಕ) ಲಾಲಾ ಲಜಪತ್ ರಾಯ್
ಡ) ಗೋಖಲೆ✔✔


 24) ಮೂರನೆ ಆಂಗ್ಲೊ ಮೈಸೂರು ಯುದ್ಧ ನಡೆದ ಕಾಲ? ?
ಅ)1767--69
ಬ)1780--84
ಕ)1790-92✔✔
ಡ)1780-83
[10/28, 9:03 PM]

25) ಕಾಂಗ್ರೆಸ್ ಸ್ಥಾಪನೆ ಆಗಿದ್ದು? ?

ಅ)1885✔✔
ಬ)1785
ಕ)1887
ಡ)1854

ಕ್ವೀಜ್

*ಜ್ಞಾನ ರಸಪ್ರಶ್ನೆ ಗ್ರುಪ್ ನಲ್ಲಿ ನಡೆದ ಕ್ವೀಜ್*:~

ಕ್ವೀಜ್ ಸಂಯೋಜಕರು ->
Raghavendra Bangalore

( ಗಮನಿಸಿ ದೀಪಾವಳಿ ಹಬ್ಬದ ಶುಭಾಶುಭ ಕೋರುತ್ತಾ , ಇನ್ಮುಂದೆ ಕ್ವೀಜ್ ಬದಲಾವಣೆಯೊಂದಿಗೆ ತಮ್ಮಮುಂದೆ ಬರಲಿದೆ,  ಅಂದರೆ ಪ್ರತಿದಿನ ಕ್ವೀಜ್ ಸಂಚಿಕೆ ರೂಪದಲ್ಲಿ ತರಲು ಯೋಚಿಸಿದ್ದೇವೆ ... ದೀಪಾವಳಿ ಪ್ರಯುಕ್ತ ಇದು ಸಂಚಿಕೆ ಒಂದನ್ನು ಎಂದು ತೀರ್ಮಾನಿಸಿ (ಹಿಂದೆ ಆಗಿದ್ದು ಕೈ ಬಿಟ್ಟು)  ಇನ್ನುಮುಂದೆ ಪ್ರಕಾಟವಾಗುವ ಕ್ವೀಜ್ ಸಂಚಿಕೆ ರೂಪದಲ್ಲಿ ಬರುತ್ತದೆ ಇದರ ಬಗ್ಗೆ admin ಜೊತೆ ಚರ್ಚಿಸಿದ್ದೇವೆ ಅವರ ಅನುಮತಿ ದೊರೆತಿದೆ)


ಇದು ಸಂಚಿಕೆ :~ 01

ಸಮಯ:~

*[10/29, 7:59 PM]*

1. ಜೂಲೈ 10 2016 ರಂದು ಕೆಳಗಿನ ಯಾವ ದೇಶದ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶೆಯಾಗಿ ಸುಶೀಲಾ ಕರ್ಕಿ ನೇಮಕಗೊಂಡರು.
1) ನೇಪಾಳ
2) ಭಾರತ
3) ಶ್ರೀಲಂಕಾ
4) ಭೂತಾನ್

A✅


2.
ರಾಮ್ ಪಾಲ್ ಕಲ್ಲಿದ್ದಲು ಶಾಖೋತ್ಪನ್ನ ಶಕ್ತಿ ಸ್ಥಾವರ ಎಲ್ಲಿದೆ ?
1) ಭಾರತ
2) ಬಾಂಗ್ಲಾದೇಶ
3) ಶ್ರೀಲಂಕಾ
4)ಇಂಡೋನೇಷ್ಯಾ


2✅

3.
 ಜೂಲೈ 13 2016 ರಂದು ಕೆಳಗಿನ ಯುನೈಟೆಡ್ ಕಿಂಗ್ ಡಮ್ ನ ಪ್ರಧಾನಿಯಾಗಿ ತೆರೇಸಾ ಮೇ ನಿಯುಕ್ತಗೊಂಡರು. ಅವರು ಯು ಕೆಯ ಎಷ್ಟನೇ ಪ್ರಧಾನಿ
1) 73 ನೇ
2) 74 ನೇ
3) 75 ನೇ
4) 76 ನೇ

4 ✅

4.
ಟ್ರಕ್  ವೊಂದನ್ನು ಓಡಿಸಿ ಭಯೋತ್ಪಾದಕನೊಬ್ಬ ಹಲವಾರು ಜನರನ್ನು ಹತ್ಯೆಗೈದ ಘಟನೆ ನೈಸ್ ಎಂಬ ನಗರದಲ್ಲಿ ಜೂಲೈ 14 ರಂದು ನಡೆಯಿತು. ಈ ನಗರ ಯಾವ ದೇಶದಲ್ಲಿದೆ.
1) ಫ್ರ್ಯಾಂಸ್
2) ಜರ್ಮನಿ
3) USA
4)ಇಟಲಿ


1✅

5.
11 ನೇ ಏಷ್ಯ- ಯುರೋಪ್ ಶೃಂಗ ಸಭೆ ಉಲನ್ ಬಟಾರ್ ನಲ್ಲಿ ನಡೆಯಿತು . ಇದು ಎಲ್ಲಿದೆ ?
1) ಪೋಲಂಡ್
2) ಟರ್ಕಿ
3) ಮಂಗೋಲಿಯ
4) ಕಝಕಸ್ತಾನ್

3✅

6.
ವಿಶ್ವ ಬ್ಯಾಂಕ್ ನ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ಜೂಲೈ 2016 ರಲ್ಲಿ ನಿಯುಕ್ತಗೊಂಡವರು ಯಾರು ?
1) ರಘು ರಾಮ್ ರಾಜನ್
2) ಕೌಶಿಕ್ ಬಸು
3)ಮಾಲ್ಕಮ್ ಟರ್ನ್ ಬುಲ್
4) ಪೌಲ್ ರೋಮರ್

 4✅

7.
ಜೂಲೈ 19 ರಂದು ಮಾಲ್ಕಮ್ ಟರ್ನ್ ಬುಲ್ ಎನ್ನುವರು ಕೆಳಗಿನ ಯಾವ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು ?
1) ಟರ್ಕಿ
2) ಆಸ್ಟ್ರೇಲಿಯಾ
3)ಇಟಲಿ
4) ಫ್ರಾ ನ್ಸ್

2 ✅

8.
ಭಾರತದ ಮಾನವಾದಿತ್ಯ ರಾಠೋಡ್ ಯಾವ ಕ್ರೀಡೆಗೆ  ಸಂಬಂಧಿಸಿದ್ದಾನೆ ?
1) ಕ್ರಿಕೆಟ್
2) ಷೂಟಿಂಗ್
3) ಜಾವಲಿನ್ ಎಸೆತ
4) ಆರ್ಚರಿ
2✅

9.
 ಕಪ್ಪು ರಂಧ್ರಗಳ ಬಗ್ಗೆ ಕೆಳಗೆ ಕೊಟ್ಟಿರುವುದರಲ್ಲಿ ಯಾವುದು ಸರಿ
1) ಅದು ಬೆಳಕಿನ ಕಿರಣಗಳನ್ನು ಉತ್ಸರ್ಜಿಸುತ್ತದೆ
2) ಅದು ವಿಕಿರಣಶೀಲ ಕಿರಣಗಳನ್ನು ಉತ್ಸರ್ಜಿಸುತ್ತದೆ
3) ಅದು alpha - gama  ಕಿರಣಗಳನ್ನು ಉತ್ಸರ್ಜಿಸುತ್ತದೆ
4) ಅದು ಕ್ಪ - ಕಿರಣಗಳನ್ನು ಉತ್ಸರ್ಜಿಸುತ್ತದೆ

4.✅

10.
  ಜಗತ್ತಿನಲ್ಲಿ ಅತೀ ಹೆಚ್ಚು ನಿರುದ್ಯೋಗದ ಸಮಸ್ಯೆ ಎದುರಿಸುತ್ತಿರುವ ರಾಷ್ಟ್ರ ಯಾವುದು?
೧.ಜಿಂಬಾವ್ವೆ ಸರಿ
೨.ಭಾರತ
೩.ಮಯನ್ಮಾರ್
೪.ಭೂತಾನ್
 ೧✅

11.

ಬೇಟ್ವಾ ನದಿ ಮಂಡಳಿಯನ್ನು ಎಷ್ಟರಲ್ಲಿ ಸ್ಥಾಪಿಸಾಲಾಯಿತು?
೧.೧೯೭೨
೨.೧೯೭೬
೩.೧೯೮೭
೪.
೨✅

12.

2012ರ ವರ್ಷವನ್ನು ಅಂತರರಾಷ್ಟ್ರೀಯ ______________ ವರ್ಷವಾಗಿ ಆಚರಿಸಲಾಗುತ್ತಿದೆ.
1) ಅಂತರರಾಷ್ಟ್ರೀಯ ಖಗೋಳ ವರ್ಷ.
2)  ಅಂತರರಾಷ್ಟ್ರೀಯ ಯುವ ವರ್ಷ.
3) ಅಂತರರಾಷ್ಟ್ರೀಯ ಸಹಕಾರ ವರ್ಷ.
4)  ಅಂತರರಾಷ್ಟ್ರೀಯ ರಸಾಯನ ವರ್ಷ.
 C✅

13.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂತರರಾಷ್ಟ್ರೀಯ ಅಹಿಂಸಾ ದಿನವನ್ನು ಯಾವ ವರ್ಷದಿಂದ ಆರಂಭಿಸಿದೆ?

1) 2005
2) 2007
3) 2009
4) 2011
 2✅

14.
 'ಬನಾರಸ್ ವಿಶ್ವವಿದ್ಯಾಲಯ' ಸ್ಥಾಪಿಸಿದವರು ಯಾರು?

1)ರಾಜಾಜಿ ಗೋಪಾಲಚಾರ್ಯ.
2)ಜಿ.ವಿ.ಮಾಳವಾಂಕರ.
3)ಗೋವಿಂದ ರಾನಡೆ.
4)ಮದನ ಮೋಹನ ಮಾಳವಿಯ.
: 4✅

15.
ಯಾವ ರಾಷ್ಟ್ರವು ಜಗತ್ತಿನ ಪ್ರಥಮ ಕೃತಕ ಉಪಗ್ರಹವನ್ನು ಉಡಾವಣೆ ಮಾಡಿತು?
 1) ಚೀನಾ.    
2) ರಷ್ಯಾ.    
3) ಅಮೆರಿಕ.      
4) ಬ್ರಿಟನ್.

 2✅

16.
'ಭಾರತ ರತ್ನ' ಪ್ರಶಸ್ತಿಯನ್ನು ಮರೋಣತ್ತರವಾಗಿ ಪ್ರದಾನ ಮಾಡಲು ಆರಂಭಿಸಿದ ವರ್ಷ ಯಾವುದು?
1) 1964    
2) 1954    
3) 1965      
4)

2✅

17.
ಭಾರತ ತನ್ನ ಪ್ರಥಮ ಕೃತಕ ಉಪಗ್ರಹವಾದ 'ಆರ್ಯಭಟ'ವನ್ನು ರಷ್ಯಾದ ಸಹಯೋಗದೊಂದಿಗೆ ಯಾವ ವರ್ಷ ಉಡಾಯಿಸಲಾಯಿತು?
1) 1972
2) 1973
3) 1974
4) 1975

4✅

18.
 2011 ರ ಜನಗಣತಿಯಂತೆ ಅತಿ ಕಡಿಮೆ ಲಿಂಗಾನುಪಾತ ಹೊಂದಿರುವ ರಾಜ್ಯ ಯಾವುದು?
1)  ಹರಿಯಾಣಾ.    
2) ಹಿಮಾಚಲ ಪ್ರದೇಶ.    
3) ಸಿಕ್ಕಿಂ.    
4) ಉತ್ತರಪ್ರದೇಶ.


1✅

19.
ರಿ ಇಂಟಿಗ್ರೆಟಿಸ್ ಇಂಡಿಯಾ  ವಿತ್ ದಿ ವಲ್ಡ್ ಎಕಾನಮಿ ಅಂಡ್ ಅಂಡರ್ ಸ್ಟಾಂಪಿಂಗ್ ರಿಪಾಸ್ಮಸ್ ಗ್ರಂಥದ ಕತೃ ಯಾರು?
1.ಸಚಿನ್ ತೆಂಡೂಲ್ಕರ್
2.ಸರ್. ಎಂ . ವಿ
3.ಸುರೇಶ್ ತೆಂಡೂಲ್ಕರ್
4.ಜಿ.ಸಿ ಕುಮಾರಪ್ಪ


3✅

20.
2005ರಲ್ಲಿ ವಿಶ್ವಕಪ್ ಫೈನಲ್ ನಲ್ಲಿ ಆಸ್ಟ್ರೇಲಿಯ ಕ್ಕೆ ನ್ಯುಜಿಲ್ಯಾಂಡ್ ಒಡ್ಡಿದ ರನ್ ಗಳ ಸವಾಲು ಎಷ್ಟು?
1.277
2.183
3.238
4.269



2✅

21.
ಒಂದು ಕೊಂಬಿನ ಘೇಂಡಾಮೃಗ ಯಾವ ಯಾವ ದೇಶದಲ್ಲಿ ಕಂಡು ಬರುತ್ತವೆ ?
1. ಭಾರತ
2. ಚೀನಾ
3. ನೇಪಾಳ
4. ಬರ್ಮಾ
ಎ. 1 & 4 ಮಾತ್ರ
ಬಿ. 1 & 3 ಮಾತ್ರ
ಸಿ. 1, 3 & 4 ಮಾತ್ರ
ಡಿ. ಎಲ್ಲವೂ

 1✅

22.

ಲೋಕಸಭೆಗೆ ಇಬ್ಬರು ಸದಸ್ಯರನ್ನು ಚುನಾಯಿಸುವ ರಾಜ್ಯ ಯಾವುದು ?
1. ಮಿಜೋರಾಂ
2. ಸಿಕ್ಕಿಂ
3. ನಾಗಲ್ಯಾಂಡ್
4. ಮೇಘಾಲಯ 2✅

23.

2019ನೇ ಸಾಲಿನ 13ನೇ ದಕ್ಷಿಣ ಏಷಿಯನ್ ಕ್ರೀಡಾಕೂಟ ನಡೆಯುವ ಸ್ಥಳ ?
1.ಭಾರತ- ಅಸ್ಸಾಂ
2. ಬಾಂಗ್ಲಾ- ಢಾಕಾ
3. ಶ್ರೀಲಂಕಾ -ಕೊಲಂಬೊ
4. ನೇಪಾಳ - ಕಠ್ಮಂಡು
4✅

24.
ಕೇಂದ್ರ ಬಜೆಟ್ ಮಂಡಿಸಿದ ಏಕೈಕ ಮಹಿಳೆ ಯಾರು ?
1.ಇಂದಿರಾ ಗಾಂಧಿ
2. ಮಮತಾ ಬ್ಯಾನರ್ಜಿ
3. ಉಮಾ ಭಾರತಿ
4. ಸೋನಿಯಾ ಗಾಂಧಿ
 1✅

25.
ಭಾರತವು ಚುಕ ಜಲ ವಿದ್ಯುತ್ ಯೋಜನೆಯನ್ನು ಎಲ್ಲಿ ನಿರ್ಮಿಸಿದೆ ?
1. ಮೈಯನ್ಮಾರ್
2. ಬಾಂಗ್ಲಾದೇಶ
3. ನೇಪಾಳ
4. ಭೂತಾನ್
2✅

26.

India is the fourth largest FDI source for which Arab nation?
1. Iran
2. Iraq
3. Qatar
4. None of the above
3✅

27.

Which country’s original mass disappeared into the earth’s interior 60 million years ago, according to scientists?
1. Africa
2. India
3. Sri Lanka
4. None of the above
 2✅

28.

India ranked at which position out of 118 nations in the Global Hunger Index?
1. 95
2. 96
3. 97
4.98
3✅

29.

UN observes 11th oct as the day of young women and girls every year since which year?
1. 2011
2. 2012
3. 2013
4. 2014
2✅

30.

Which state appointed an NBA player as its first ambassador to Mars?
1.Japan
2. China
3. India
4. United States
2✅

*[10/29, 8:53]*

Thursday, 6 October 2016

ಓದಿನಲ್ಲಿ ಸೂತ್ರ ಬಳಸುವುದು ಹೇಗೆ

ನಾವು ಓದಿನಲ್ಲಿ coding (ಸುತ್ರ) ಬಳಸುವದು ಮಹತ್ವ ಈ ಕೆಳಗಡೆ 👇ನಾನು ಕೆಲವೊಂದು ಸೂತ್ರ ಬಳಸಿರುವೆ,ನೀವು ಅದೇ ರೀತಿ ಓದುವಾಗ ಪ್ರಯತ್ನ ಮಾಡಿ ನೋಡಿ




🇮🇳🇮🇳🌺🌺🇮🇳🇮🇳
*ಜಗತ್ತಿನ 10 ದೊಡ್ಡ ದೇಶಗಳು*
ಸೂತ್ರ-------
"RKC AB AB AKS"
R-------ರಷ್ಯಾ
K-------ಕೆನಡಾ
C-------ಚೀನಾ
A-------ಅಮೇರಿಕಾ
B-------ಬ್ರೆಜ್ಜಲ್
A--------ಆಸ್ಟ್ರೇಲಿಯಾ
B---------ಭಾರತ
A----------ಅರ್ಜೆಂಟೈನ
K----------ಕಜಕಿಸ್ತನ
S-----------ಸುಡಾನ

*ಅರಬ್ಬೀ ಸಮುದ್ರಲ್ಲಿ 5 ರಾಜ್ಯಗಳು ಕರವಾಳಿ ತೀರ ಹೊಂದಿವೆ ್ತ*
ಸೂತ್ರ--+-----------
G2 M K2
G----ಗುಜರಾತ
G--------ಗೋವಾ
M-------ಮಹಾರಾಷ್ಟ್ರ
K--------ಕೇರಳ
K--------ಕರ್ನಾಟಕ

*ಬಂಗಾಳಕೊಲ್ಲಿಗೆ ನಾಲ್ಕು ರಾಜ್ಯಗಳು ಕರಾವಳಿ ತೀರ ಹೊಂದಿವೆ*
ಸುತ್ರ-----+++-------
AP OT ನಡಿ
A----------ಆ?ದ್ರಪ್ರದೇಶ
P----------ಪ.ಬಂಗಾಳ
O----------ಒರಿಸ್ಸಾ
T-------+-ತ.ನಾಡು


*ದಕ್ಷಿಣ ಭಾರತದಲ್ಲಿ ಪೂರ್ವಕ್ಕೆ ಹರಿದು ಬಂಗಾಳಕೊಲ್ಲಿ ಸೇರುವ ನದಿಗಳು*
👇👇👇👇
ಸೂತ್ರ---------------🌺
ಪಾಪ ಗೋಕಾಕ ಮಘಮ ಬಿತ್ತು ::::::::::::🌺

ಪಾ------ಪಾಲರ್
ಪ------- ಪೆನ್ನಾರ್
ಗೋ--- ಗೋದಾವರಿ
ಕಾ-------ಕಾವೇರಿ
ಕ--------ಕೃಷ್ಣ
ಮ-------ಮಲಫ್ರಭಾ
ಘ-------ಘಟಪ್ರಭಾ
ಮ------ಮಹಾನದಿ
ಬೀ------ಭೀಮಾ
ತ್ತು-------ತುಂಗಭದ್ರಾ


🙏🏻🙏🏻🙏🏻🙏🏻
jnanavahinigk@gmail.com

*ದಕ್ಷಿಣ ಭಾರತದಲ್ಲಿ ಪಶ್ಚಿಮಕ್ಕೆ ಹರಿದು ಅರಬ್ಬೀ ಸಮುದ್ರ ಸೇರುವ ನದಿಗಳು*

ಸೂತ್ರ-----------🌺
ಸನತ ಮಾ ಕಾಶಪನೆ🌺

ಸ--------- ಸಾಬರಮತಿ
ನ---------ನರ್ಮದಾ
ತ---------ತಪತಿ
ಮಾ-----ಮಾಂಡೋವಿ
ಕಾ------ಕಾಳಿ ನದಿ
ಶ---------ಶರಾವತಿ
ಪ---------ಪರಿಯಾರ್
ನೇ-------- ನೇತ್ರಾವತಿ


*ಕರ್ನಾಟಕದಲ್ಲಿ ಪೂರ್ವಕ್ಕೆ ಹರಿದು ಬಂಗಾಳಕೊಲ್ಲಿ ಸೇರುವ ನದಿಗಳು*
👇👇
ಸೂತ್ರ-------;🌺
ಹೇ ಲಕ್ಷ್ಮಣ ಆ ಕೃಷ್ಣ ಕಾವೇರಿಯ ಮಘ ಹಾರಂಗಿ ತುಂಬಿಸಿದ ನದಿಗಳು:
🌺

ಹೇ------------ಹೇಮಾವತಿ
ಲಕ್ಷ್ಮಣ-------ಲಕ್ಷ್ಮಣತಿರ್ಥ
ಆ--------------ಆರ್ಕಾವತಿ
ಕೃಷ್ಣ -----------ಕೃಷ್ಣ ನದಿ
ಕಾವೇರಿಯ----ಕಾವೇರಿ
ಮ---------------ಮಲಪ್ರಭಾ
ಘ--------------ಘಟಪ್ರಭಾ
ಹಾರಂಗಿ------ಹಾರಂಗಿ
ತುಂ-----------ತುಂಗಭದ್ರಾ
ಬಿ--------------ಭಿಮಾ

🌺🌺🌺

*ಕರ್ನಾಟಕದಲ್ಲಿ ಪಶ್ಚಿಮಕ್ಕೆ ಹರಿದು ಅರಬ್ಬಿ ಸಮುದ್ರ ಸೇರುವ ನದಿಗಳು*

👇👇
ಸೂತ್ರ --------

ಶೇನೆಕಾ ವರಬೇಡಿ ಅಘನಾಸಿನಿ ನದಿ ದಾಟಿದಳು

ಶೇ---------ಶರಾವತಿ
ನೆ--+------ನೇತ್ರಾವತಿ
ಕಾ---------ಕಾಳಿ
ವರ-------ವರಹಾನದಿ
ಬೇಡಿ-----ಬೇಡ್ತಿ
ಅಘನಾಸಿಿನಿ--ಅಘನಾಸಿನಿ

*ಧನ್ಯವಾದಳು ಸೂತ್ರದ ಮೂಲಕ ಓದುವುದು ಒಳಿತು*


Rachayya s
(jnanavahinigk@gmail.com)

Sunday, 2 October 2016

ಭಾರತ ಬಗ್ಗೆ ಕೆಲವೊಂದು ಮಾಹಿತಿ

ಭಾರತದ ಬಗ್ಗೆ


ಜ್ಞಾನವಾಹಿನಿ GK
9901494699
(ವಿಜಯಪುರ ಜಿಲ್ಲೆ)


#ಭಾರತ ಎಂಬ ಹೆಸರು ಜೈನ ತೀರ್ಥಂಕರರಾ ಋಷಭನಾಥನ ಮಗ ಭರತ ಚಕ್ರವರ್ತಿ ಎಂಬ ಆಡಳ್ವಿಕೆಯಿಂದ  ಬಂದಿದೆ --
ೆ- ಜೈನ ಸಾಹಿತ್ಯ


#@ ದುಷ್ಯಂತ & ಶಕುಂತಲೆಯರ ಪುತ್ರ ಭರತನಿಂದ ಭಾರತ ಎಂಬ ಹೆಸರು ಬಂದಿದೆ -- ಪುರಾಣ

ಭಾರತವನ್ನು ಇಂಡಿಯಾ ಎಂದು ಕರೆದವರು --- ಗ್ರೀಕರು

ಭಾರತವನ್ನು ಹಿಂದುಸ್ಥಾನ ಎಂದು ಕರೆದವರು --- ಪರ್ಷಿಯನ್ ರು


ಭಾರತದ ಜನಸಂಖ್ಯೆ ಸುಮಾರು 121 ಕೋಟಿ (2011)
 ಜಗತ್ತಿನಲ್ಲಿ 2ನೇ ಸ್ಥಾನ

ಭಾರತದ ಒಟ್ಟು ವಿಸ್ತೀರ್ಣ -
32,87,263 ಚ.ಕಿ.ಮೀ

###
ಭಾರತವು 7 ರಾಷ್ಟ್ರಗಳೊಂದಿಗೆ ಗಡಿ ರೇಖೆ ಹಂಚಿಕೊಂಡಿದೆ###
1)ಪಾಕಿಸ್ತಾನ
2)ಅಫಘಾನಿಸ್ತಾನ
3)ಚೀನಾ
 4)ನೇಪಾಳ
5)ಭೂತಾನ
6)ಮಯಾನ್ಮರ
7)ಬಾಂಗ್ಲಾದೇಶ

## ಭಾರತದೊಂದಿಗೆ ಅತಿ ಉದ್ದವಾದ ಭೂಗಡಿ ಹೊಂದಿದ ದೇಶ -- ಬಾಂಗ್ಲಾದೇಶ. 4096km

 ಕಡಿಮೆ - ಅಫಘಾನಿಸ್ತಾನ 80km

##ಶ್ರೀಲಂಕಾ ಮತ್ತು ಮಾಲ್ಡೀವ್ಸ ದ್ವೀಪ್ ರಾಷ್ಟಗಳಾಗಿವೆ ##₹


##ಪ್ರಪಂಚದಲ್ಲಿ ಅತ್ಯಂತ ಎತ್ತರವಾದ ಶಿಖರ --- ಮೌಂಟ್ ಎವರೆಸ್ಟ್ (8848m)  ಇದು ನೆಪಾಳ ಟಿಬೆಟ್ ಮಧ್ಯದಲ್ಲಿದೆ

ಭಾರತದ ಅತಿ ಎತ್ತರವಾದ ಶಿಖರ -- ಗಾಡ್ವಿನ್ ಆಸ್ಟಿನ್ (8611m)


## ಗಂಗಾನದಿಯ ಉಗಮಸ್ಥಾನ --- ಗಂಗೋತ್ರಿ

## ರಾಜಸ್ಥಾನದ ಗಂಗಾನಗರ ಅತಿ ಹೆಚ್ಚು ಉಷ್ಣಾಂಶ ದಾಖಲಾದ ಪ್ರದೇಶ


## ರಾಜಸ್ಥಾನದ ರೊಯ್ಲಿ ಭಾರತದಲ್ಲಿ ಕಡಿಮೆ ಮಳೆ ದಾಖಲಾದ ಪ್ರದೇಶ ...

##ಪ್ರಪಂಚದಲ್ಲೆ ಅಧಿಕ ಮಳೆ ಕಂಡು ಬಂದ ಸ್ಥಳ-- ಮೌಸಿನ್ ರಾಮ್


##ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ರಾಜ್ಯ--- ಮಧ್ಯಪ್ರದೇಶ

#######$$$$$$#
ಜ್ಞಾನವಾಹಿನಿGK GROUP
9901494699
##########$#$##

ಭಾರತದ ಮೊದಲ ರಾಷ್ಟ್ರೀಯ ಉದ್ಯಾನವನ--- ಜೇಮ್ ಕಾರ್ಬೆಟ್
(ಉತ್ತರ ಖಂಡ)

##ಭಾರತದ ಬಂದರುಗಳು ##

ಬಂದರು                   ರಾಜ್ಯ

ಕಾಂಡ್ಲಾ ಬಂದರು -- ಗುಜರಾತ್
ಮುಂಬೈ ಬಂದರು- ಮಹಾರಾಷ್ಟ್ರ
ನವಸೇನಾ------------ ಮಹಾರಾಷ್ಟ್ರ
ನವಮಂಗಳೂರು----ಕರ್ನಾಟಕ
ಕೊಚ್ಚಿನ್----------------ಕೇರಳ
ಮರ್ಮಗೋವಾ-------ಗೋವಾ
ಕೋಲ್ಕತ್ತಾ--------------ಪ.ಬಂಗಾಳ
ಹಾಲ್ದಾಯಿ--------------ಪ.ಬಂಗಾಳ
ಪಾರದೀಪ---------------ಓರಿಸ್ಸಾ
ವಿಶಾಕಪಟ್ಟಣಂ-------ಆ.ಪ್ರದೇಶ
ಚೆನ್ನೈ--------------------ತ.ನಾಡು

amasiddatakali@gmail.com

##ಮುಂಬೈ ಬಂದರನ್ನು ಭಾರತದ ಹೆಬ್ಬಾಗಿಲು ಎಂದು ಕರೆಯುತ್ತಾರೆ.

##ಚೆನ್ನೈ ಬಂದರನ್ನು ಅತ್ಯಂತ ಹಳೆಯ ಬಂದರು,ಕೃತಕ ಬಂದರು


##ವಿಶಾಕಪಟ್ಟಣ ಬಂದರು ನೈಸರ್ಗಿಕ ಬಂದರು.

ಕೋಲ್ಕತ್ತಾ ಬಂದರು ಚಹಾದ ಬಂದರು ಎಂದು ಪ್ರಸಿದ್ಧ ಹೊಂದಿದೆ.

##ಹಾಲ್ದಾಯಿ ಬಂದರು ಕೃತಕ ಬಂದರು ಎಂದು::;;;

##₹ಭಾರತದ ಭೂಕಂಪದ ಕೇಂದ್ರಗಳು####

ಸ್ಥಳ--------------------ರಾಜ್ಯ


ಪುಣೆ---------------------ಮಹಾರಾಷ್ಟ್ರ
ಕುಲಾಬ್----------------ಮಹಾರಾಷ್ಟ್ರ
ಗೌರಿಬಿದನೂರ--------ಕರ್ನಾಟಕ
ಹಸರಗುಂಡಿ------------ಕರ್ನಾಟಕ
ಕೋಲ್ಕತ್ತಾ---------------ಪ.ಬಂಗಾಳ
ಕೊಡೆಕೇನಾಲ್---------ತ.ನಾಡು


ಸ್ವತಂತ್ರ ಭಾರತದ ಮೊದಲ ನದಿ ಕಣಿವೆ ಯೋಜನೆ -
ದಾಮೋದರ ನದಿ ಕಣಿವೆ ಯೋಜನೆ ....

#######₹
ಬಿಹಾರದ ಕಣ್ಣೀರಿನ ನದಿ -- ಕೋಸಿ

ಪಶ್ಚಿಮ ಬಂಗಾಳದ ಕಣ್ಣೀರಿನ ನದಿ--- ದಾಮೋದರ

ಒರಿಸ್ಸಾದ ಕಣ್ಣೀರಿನ ನದಿ----ಮಹಾನದಿ



##ಬಾಕ್ರಾ ಅಣೆಕಟ್ಟು ಏಷ್ಯಾದಲ್ಲೇ ಅತ್ಯಂತ ಎತ್ತರವಾದ ಅಣೆಕಟ್ಟ##
(ಬಾಕ್ರಾ& ನಾಂಗಲ್ ಎಂಬಲ್ಲಿ (HP) ಅಣೆಕಟ್ಟು ಕಟ್ಟಲಾಗಿದೆ)

####ಜ್ಞಾನವಾಹಿನಿ9901494699

#₹₹₹₹#₹##########

ರಾಜ್ಯ--------------ಜಲವಿದ್ಯತ್

ಕರ್ನಾಟಕ ------ಶಿವನಸಮುದ್ರ
                     ತುಂಗಭದ್ರಾ
                      ಭದ್ರಾ,ಕಾಳಿ
                       ಜೋಗ

ಗುಜರಾತ್-------ಕಕ್ರಪಾರ
                        ಕಾಡನ ಯೋಜನೆ

HP-------------ಮಂಡಿ ಪವರ್ ಹೌಸ್

ಬಿಹಾರ --------------ಕೋಸಿ
                         ಸುವರ್ಣ ರೇಖಾ

ಒರಿಸ್ಸಾ----------------ಹಿರಾಕುಡ್
                           ಕೋಲಾಜ್
                          ರಂಗಾಲಿ
                           ನಾಗರಾಜ್

ಮಹಾರಾಷ್ಟ್ರ-----ಟಾಟಾಜಲವಿದ್ಯತ
                           ಬೀರಾ,
                          ಕೊಯ್ನಾ

ಆ.ಪ್ರದೇಶ-----ನಾಗಾರ್ಜುನ ಸಾಗರ
                           ಶ್ರೀಸೈಲಂ,
                     ರಾಮಪಾದ ಸಾಗರ,
                           ಸಿಲೇರು.
ತ.ನಾಡು----------ಮೆಟ್ಟೂರು ,
                           ಪೈಕಾರ,
                          ಪೆರಿಯಾರ್,
         ................ಕುಂದ್ಹಾ.

ಮ.ಪ್ರದೇಶ---------ಬನ್ ಸಾಗರ
                          ಗಾಂಧಿಸಾಗರ

## ಪಂಜಾಬ್ ನ್ನು ಗೋಧಿಯ ಕಣಜ ಎಂದು ಕರೆಯುತ್ತಾರೆ.

##ಉತ್ತರ ಪ್ರದೇಶವು ಅತಿ ಹೆಚ್ಚು ಗೋಧಿ ಉತ್ಪಾದಿಸುವ ರಾಜ್ಯ.


##₹ ಆಂಧ್ರಪ್ರದೇಶ ಭತ್ತದ ಕಣಜ ಎಂದು ಕರೆಯುತ್ತಾರೆ.

##ಪ.ಬಂಗಾಳ ಭಾರತದಲ್ಲಿ ಅತಿ ಹೆಚ್ಚು ಭತ್ತ ಬೆಳೆಯುವ ರಾಜ್ಯ.

### ಉತ್ತರ ಪ್ರದೇಶ ಅತಿ ಹೆಚ್ಚು ಕಬ್ಬು ಉತ್ಪಾದಿಸುವ ರಾಜ್ಯ.

### ಭಾರತದಲ್ಲಿ  ಅತಿ ಹೆಚ್ಚು ಕಾಫಿ ಉತ್ಪಾದಿಸುವ ರಾಜ್ಯ-- ಕರ್ನಾಟಕ


###ಅತಿ ಹೆಚ್ಚು ಚಹಾ ಉತ್ಪಾದಿಸುವ ರಾಜ್ಯ--- ಅಸ್ಸಾಂ


ಚಹಾ ಉತ್ಪಾದನೆ ಯಲ್ಲಿ ಭಾರತ ಮೊದಲ ಸ್ಥಾನ


ಹೆಚ್ಚು ಹುಲ್ಲುಗಾವಲು ಹೊಂದಿದ ಪ್ರದೇಶ -- ಹಿಮಾಚಲಪ್ರದೇಶ

## ಪ್ರಮುಖ ಅಂತರರಾಷ್ಟ್ರೀಯ   ವಿಮಾನ ನಿಲ್ದಾಣಗಳು ಹೆಸರು ಮತ್ತು ಸ್ಥಳ ###


ಹೆಸರು--------   --------ಸ್ಥಳ

ಸಹರಾ--------------------ಮುಂಬಯಿ
ಇಂದಿರಾಂಧಿ-------------ದೆಹಲಿ
ಸುಭಾಸಚಂದ್ರಬೋಸ್-ಕೋಲ್ಕತ್ತಾ
ಕೆಂಪೇಗೌಡ -------------ಬೆಂಗಳೂರು
ಪಣಜಿ---------------------ಗೋವಾ
ತಿರುವನಂತಪುರ-------ಕೇರಳ
ಅಣ್ಣಾ ದೊರೈ---------------ಚೆನ್ನೈ
ರಾಜೀವಗಾಂಧಿ-----------ಹೈದ್ರಬಾದ
ಸರ್ದಾರ್ -------------ಗುಜರಾತ್
ವಲ್ಲಭಭಾಯ್ ಪಟೇಲ್
ಝಾನ್ಸಿರಾಣಿ------------ಅಮೃತಸ್ವರ



amasiddatakali@gmail.com
9901494699

ಭಾರತದ ಅತ್ಯಂತ ದೊಡ್ಡ ಮರಭೂಮಿ - ಥಾರ ಮರಭೂಮಿ

ದಕ್ಷಿಣ ಭಾರತದ ಗಿರಿಧಾಮಗಳ ರಾಣಿ -

#₹ ಅತ್ಯಂತ ಕಡಿಮೆ ಉಷ್ಣಾಂಶ ದಾಖಲಾದ ಸ್ಥಳ--- ಡ್ರಾಸ್

##ಭಾರತದ ಪ್ರಮುಖ ಅಣೆಕಟ್ಟುಗಳು##


ಅಣೆಕಟ್ಟು------ನದಿ---------ರಾಜ್ಯ

ಬಾಕ್ರಾನಂಗಲ--ಸಟ್ಲೇಜ್----HP
ಹಿರಾಕುಡ---ಮಹಾನದಿ--ಒರಿಸ್ಸ
ದಾಮೋದರ-ದಾಮೋದರ--PB
ತೇಹರಿ------ಭಾಗಿರಥಿ----------UK
ರಿಹಾಂದ್--ರಿಹಾಂದ್---------UP
ಕೋಸಿ------ಕೋಸಿ----------ನೇಪಾಳ ಮತ್ತು ಬಿಹಾರ
ಚಂಬಲ್-----ಚಂಬಲ---------MP
ನರ್ಮದಾ----ನರ್ಮದಾ-----MP
ತುಂಗಭದ್ರಾ--ತುಂಗಭದ್ರಾ---KAR
ನಾಗಾರ್ಜುನ--ಕೃಷ್ಣಾ-----------AP
ಸಾಗರ
ಆಲಮಟ್ಟಿ------ಕೃಷ್ಣಾ-----------KAR


ಜ್ಞಾನವಾಹಿನಿ ಗ್ರುಪ್
9901494699

##ಭಾರತದ ಪ್ರಮುಖ ಉದ್ಯನವನಗಳು ಮತ್ತು ರಾಜ್ಯಗಳು##


ಉದ್ಯಾನವನ------------------ರಾಜ್ಯ

ಪ್ರಿಯದರ್ಶಿನಿ--------------MP
ಪೆರಿಯಾರ್-------------- ಕೇರಳ
ವಾಲ್ಮೀಕಿ --------------------ಬಿಹಾರ
ಗೌತಮಬುದ್ಧ--------------ಬಿಹಾರ
ಶೈಲಂಟವ್ಯಾಲಿ-------------ಕೇರಳ
ಕನ್ಹಾ,ಪನ್ಹಾ,----------------MP
ವೆಂಕಟೇಶ್ವರ---------------AndrP
ನಂದಾದೇವಿ----------------UK
ಪಿನ್ ವ್ಯಾಲಿ----------------HP
ಸಂಜಯಗಾಂಧಿ-----------MH
ಸುಂದರಬನ್ಸ---------------PB
ಇಂದಿರಾಗಾಂಧಿ-----------TN
ಕಾಜಿರಂಗ್,----------------ಆಸ್ಸಂ
ಮಾನಸ್
ಕಾಂಚನಚುಂಗಾ--------ಸಿಕ್ಕಿಂ

ಅಮಸಿದ್ದ ಟಾಕಳಿ

###₹₹₹₹₹₹
ಭಾರತದ ಪ್ರಮುಖ ಸರೋವರಗಳು

ಸರೋವರ---------------------ರಾಜ್ಯ
ನಾಲ್--------------------ಗುಜರಾತ್
ದಾಲ್----------------ಜಮ್ಮುಕಾಶ್ಮೀರ
ಅನಂತನಾಗ್--------  " " "
ಶೇಷನಾಗ--------------" " "
ಚಿಲ್ಕಾ----------------- ಓಡಿಸ್ಸಾ
ಲೋನಾರ-----------ಮಹಾರಾಷ್ಟ್ರ
ಸಾಂಬಾರ್----------ರಾಜಸ್ಥಾನ
ಅನಾಸಾಗರ-----" " " "
ಉದಯಸಾಗರ--" " "
ನೈನಿತಾಲ------------ಉ.ಖಂಡ
ಭೀಮತಾಲ---------ಉ.ಖಂಡ
ವೆಂಬನಾಡು-------ಕೇರಳ
ಪೇರಿಯಾರ್------ಕೇರಾಳ


ದಾಲ್ ಸರೋವರ ಜಮ್ಮು ಕಾಶ್ಮೀರದ ಒಡವೆ ಎಂದು ಕರೆಯುತ್ತಾರೆ.

###ಭಾರತದ ಅತ್ಯಂತ ದೊಡ್ಡ ಸರೋವರ ---ಚಿಲ್ಕ ಸರೋವರ

ಧನ್ಯವಾದಗಳು

(ವಿಜಯಪುರ ಜಿಲ್ಲೆ)

Saturday, 1 October 2016

ಕರ್ನಾಟಕದ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ

ಕರ್ನಾಟಕದ ಬಗ್ಗೆ ಸಂಕ್ಷಿಪ್ತ ಮಾಹಿತಿ

ತಿದ್ದುಪಡಿ ಯೊಂದಿಗೆ

(ಅದೆಷ್ಟೋ ಬಾರಿ ಗಮನಿಸಿ ಬರೆದರು ಕೆಲವೊಂದು ಬಾರಿ ತಪ್ಪುಗಳು ಆಗುತ್ತಿರುತ್ತವೆ, ಇಂತಹ ಕೆಲವೊಂದು ತಪ್ಪುಗಳು ಆಗಿದ್ದಲ್ಲಿ ನನ್ನ ನಂಬರಗೆ ಮೆಸೇಜ್ ಮುಖಾಂತರ ತಿಳಿಸಿ,  ನಿಮ್ಮ ಸಲಹೆ ಸೂಚನೆ ಮುಕ್ತ ಮನಸ್ಸಿಂದ ಸ್ವೀಕರಿಸುವೆ ,, ಮುಂದಿನ ಲೇಖನದಲ್ಲಿ ಈ ತರಹದ ಕೆಲವು ಸಣ್ಣ-ಪುಟ್ಟ ತಪ್ಪಗಳು ಆಗದಂತೆ ಎಚ್ಚರಿಕೆಯಿಂದ ಬರೆಯುವೆ. ನಿಮಗೆ ಧನ್ಯವಾದಗಳು)

ಕರ್ನಾಟಕದ  ಬಗ್ಗೆ ಸಂಕ್ಷಿಪ್ತ  ಮಾಹಿತಿ

ಅಮಸಿದ್ದ ಟಾಕಳಿ
(ವಿಜಯಪುರ ಜಿಲ್ಲೆ)

ಜ್ಞಾನವಾಹಿನಿ ಗ್ರುಪ್


*ಕರ್ನಾಟಕದ ರಾಜಧಾನಿ? ?
ಬೆಂಗಳೂರು

#ಬೆಂಗಳೂರಿನ ಹಳೆಯ ಹೆಸರು?
ಬೆಂದಕಾಳೂರು


ಕರ್ನಾಟಕದ ಒಟ್ಟು ವಿಸ್ತೀರ್ಣ?
1,91,791 ಚ.ಕಿ.ಮೀ

#ಕರ್ನಾಟಕದ ಒಟ್ಟು ಜನಸಂಖ್ಯೆ?
6,11,30,704
(2011 ಜನಗಣತಿ )

#ಕರ್ನಾಟಕದ ಒಟ್ಟು ಜಿಲ್ಲೆಗಳು?
30


#ಕರ್ನಾಟಕದ ಒಟ್ಟು ವಿಧಾನಸಭಾ ಸ್ಥಾನಗಳು ?
224 + 1ಆಂಗ್ಲೊ ಇಂಡಿಯನ್

#ಕರ್ನಾಟಕದ ಒಟ್ಟು ವಿಧಾನಪರಿಷತ್ತು ಸ್ಥಾನಗಳು- 75


#ಕರ್ನಾಟಕದ ಲೋಕಸಭಾಸ್ಥಾನಗಳು -
28

#ರಾಜ್ಯಸಭಾ ಸ್ಥಾನಗಳು
12

ಹೆಚ್ಚು ವಿಸ್ತೀರ್ಣ ಹೊಂದಿದ ಜಿಲ್ಲೆ?
ಬೆಳಗಾವಿ
 (ರಾಜ್ಯ - ರಾಜಸ್ಥಾನದ) ‰
#ಕರ್ನಾಟಕದ ಕಡಿಮೆ ವಿಸ್ತೀರ್ಣ ಜಿಲ್ಲೆ?
ಬೆಂಗಳೂರು ನಗರ

( ಭಾರತದ ಕಡಿಮೆ ವಿಸ್ತೀರ್ಣ ಹೊಂದಿದ ರಾಜ್ಯ - ಗೋವಾ )

#ಕರ್ನಾಟಕದ ಜನಸಾಂದ್ರತೆ
319
(ಭಾರತ 382)

*ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದದ್ದು ಯಾವಾಗ? ?
1956 November 1

#ಏಕೀಕೃತ ವಿಶಾಲ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ?
*ಎಸ್.ನಿಜಲಿಂಗಪ್*ಪ

#ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದ್ದು ಯಾವಾಗ ಮತ್ತು ಆಗ ಇದ್ದ ಮುಖ್ಯಮಂತ್ರಿ?
1973 November 1 ಡಿ.ದೇವರಾಜು ಅರಸು

₹# ಪ್ರಸ್ತುತ ಕರ್ನಾಟಕದ ಮುಖ್ಯಮಂತ್ರಿ : ಸಿದ್ದರಾಮಯ್ಯ


#ಕರ್ನಾಟಕದ ಉತ್ತರದ ತುದಿ?
ಬೀದರ್

#ಕರ್ನಾಟಕದ ದಕ್ಷಿಣ ತುದಿ?
ಚಾಮರಾಜನಗರ

#ಪಶ್ಚಿಮದ ತುದಿ? ?
ಕಾರವಾರ (ಉ.ಕ)


# ಕರ್ನಾಟಕದ ಪೂರ್ವದ ತುದಿ?
ಕೋಲಾರ ಮುಳಬಾಗಿಲು

#ಕರ್ನಾಟಕವು
ಉತ್ತರಕ್ಕೆ - ಮಹಾರಾಷ್ಟ್ರ
ಪೂರ್ವಕ್ಕೆ- ಆಂಧ್ರಪ್ರದೇಶ
ನೈರುತ್ಯಕ್ಜೆ- ಕೇರಳ
ವಾಯುಕ್ಜ್ - ಗೋವಾ
ದಕ್ಷಿಣ&ಆಗ್ನೇಯಕ್ಕೆ - ತ.ನಾಡಿನೊಂದಿಗೆ ಗಡಿ ರೇಖೆ ಹಂಚಿಕೊಂಡಿದೆ.

#ಅತಿ ಹೆಚ್ಚು ಜನಸಾಂದ್ರತೆ ಹೊಂದಿದ ಕರ್ನಾಟಕದ ಜಿಲ್ಲೆ?
ಬೆಂಗಳೂರ ನಗರ
(ರಾಜ್ಯ ಬಿಹಾರ)

#ಅತಿ ಕಡಿಮೆ ಜನಸಾಂದ್ರತೆ ಹೊಂದಿದ ಕರ್ನಾಟಕದ ಜಿಲ್ಲೆಯ?
ಕೊಡಗು
(ಭಾರತ ರಾಜ್ಯ- ಅರುಣಾಚಲಪ್ರದೇಶ)

#ರಾಜ್ಯದ ಅತಿ ಹೆಚ್ಚು ಸಾಕ್ಷರತೆ ಜಿಲ್ಲೆ?
ದ.ಕನ್ನಡ


#ಕರ್ನಾಟಕದ ಮೊದಲ ಪತ್ರಿಕೆ?
ಮಂಗಳೂರು ಸಮಾಚರ

#ಕರ್ನಾಟಕದಲ್ಲಿ ಕರಾವಳಿಯನ್ನು - ಕೆನರಾ ಎಂದು ಕರೆಯುತ್ತಾರೆ

#ಕರ್ನಾಟಕದ ಅತಿ ದೊಡ್ಡ ಬಂದರು?
ನವಮಂಗಳೂರ ಬಂದರು
ನವಮಂಗಳೂರ ಬಂದರನ್ನು ಕರ್ನಾಟಕದ ಹೆಬ್ಬಾಗಿಲು ಎನ್ನುವರು.
amasiddatakali@Gmail.com

#ಕರ್ನಾಟಕದ ಅತ್ಯಂತ ಎತ್ತರದ ಶಿಖರ ಮುಳ್ಳಯ್ಯನಗಿರಿ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ

#ಚಿಕ್ಕ ಮಗಳೂರನ್ನು ಕಾಫಿಯನಾಡು ಎಂದು ಕರೆಯುತ್ತಾರೆ.


#ಕೊಡಗನ್ನು ಕಿತ್ತಳೆ ನಾಡು ಎಂದು ಕರೆಯುತ್ತಾರೆ


#ತುಮಕೂರು ಜಿಲ್ಲೆ ಮಧುಗಿರಿ ಬೆಟ್ಟ ಏಷ್ಯಾ ಖಂಡದಲ್ಲೆ ಅತಿ ಎತ್ತರವಾದ ಏಕಶಿಲಾ ಬೆಟ್ಟವಾಗಿದೆ


# ಕರ್ನಾಟಕದ ಗೋಕಾಕ  ಜಲಪಾತವನ್ನು ಭಾರತದ ನಯಾಗರ ಎಂದು ಕರೆಯುತ್ತಾರೆ.

# ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಪಡೆಯುವ ಪ್ರದೇಶ?
ಹುಲಿಕಲ್ಲು
ಮೊದಲು ಆಗುಂಬೆ ಇತ್ತು
(ದಕ್ಷಿಣದ ಚಿರಾಪುಂಜಿ ಎನ್ನುತ್ತಿದ್ದರು)


#ಅತಿ ಕಡಿಮೆ ಮಳೆ ಪಡೆಯುವ ಕರ್ನಾಟಕದ ಪ್ರದೇಶ?
ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ

#ಕರ್ನಾಟಕದ ಕಾಶ್ಮೀರ ಎಂದು ಕೊಡಗು ಜಿಲ್ಲೆ ಕರೆಯುತ್ತಾರೆ .

#
ಕರ್ನಾಟಕದ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ?
ಉತ್ತರ ಕನ್ನಡ

ಕಡಿಮೆ ಅರಣ್ಯ ಪ್ರದೇಶ ಹೊಂದಿದ ಕರ್ನಾಟಕದ ಜಿಲ್ಲೆ - ವಿಜಯಪುರ

#೦ ಬೆಂಗಳೂರು ಸಮೀಪ ರಾಮೋಹಳ್ಳಿಯಲ್ಲಿ ಅತಿದೊಡ್ಡ ಆಲದ ಮರವಿದೆ.

#ಅತಿದೊಡ್ಡ ಬೇವಿನ ಮರ - ಶಿಡ್ಲಘಟ್ಟದ ಟಿ.ವೆಂಕಟಾಪುರದ ಬಳಿ ಇದೆ.

#ಸವಣೂರನಲ್ಲಿ ಅತಿ ದೊಡ್ಡ ಹುಣಸೆ ಮರವಿದೆ
.

 ಜ್ಞಾನವಾಹಿನಿ Gk group,
9901494699



#ಕೃಷ್ಣನದಿಯು ಕರ್ನಾಟಕದಲ್ಲಿ ಹರಿಯುವ ಅತಿ ಉದ್ದವಾದ ನದಿಯಾಗಿದೆ.


#ಕರ್ನಾಟಕದ ಮೊಟ್ಟ-ಮೊದಲ ಜಲಾಶಯ - ವಾಣಿವಿಲಾಸ ಸಾಗರ


#ಕಾವೇರಿ ನದಿಯ ಉಗಮಸ್ಥಾನ - ತಲಕಾವೇರಿ/ ತಲಕಾಡು

#ಭಾರತದ ಎತ್ತರವಾದ ಜಲಪಾತ - ಕರ್ನಾಟಕದ ಜೊಗ ಜಲಪಾತ
(ಶರಾವತಿ ನದಿಗೆ ನಿರ್ಮಿಸಲಾಗಿದೆ)

#ಕರ್ನಾಟಕದಲ್ಲಿ ಅತಿ ಹೆಚ್ಚು ನೀರಾವರಿ ಹೊಂದಿರು ಜಿಲ್ಲೆ?

ಬೆಳಗಾವಿ

#ಕರ್ನಾಟಕದಲ್ಿ ಕಡಿಮೆ ನೀರಾವರಿ ಹೊಂದಿರುವ ಜಿಲ್ಲೆ?
ಕೊಡಗು

ಕರ್ನಾಟಕದಲ್ಲಿ


ಅತಿ ಹೆಚ್ಚು ಕಾಲುವೆ ನೀರಾವರಿ ಹೊಂದಿರುವ ಜಿಲ್ಲೆ?
ರಾಯಚೂರು

ಅತಿ ಹೆಚ್ಚು ಬಾವಿ ನೀರಾವರಿ ಹೊಂದಿರುವ ಜಿಲ್ಲೆ?
ಬೆಳಗಾವಿ

#ಕರ್ನಾಟಕದಲ್ಲಿ ಅತಿ ಹೆಚ್ಚು ಸಾಗುವಳಿ ಭೂಮಿಯನ್ನು ಹೊಂದಿದ ಜಿಲ್ಲೆ ಕಲಬುರ್ಗಿ, ಕಲಬುರ್ಗಿನ್ನು - ತೊಗರಿಯ ಕಣಜ ಎಂದು ಕರೆಯುವರು

*****

ಸಕ್ಕರೆ ಜಿಲ್ಲೆ ಎಂದು ಬೆಳಗಾವಿಯನ್ನು ಕರೆಯುತ್ತಾರೆ.

ಸಕ್ಕರೆ ನಗರವೆಂದು ಮಂಡ್ಯವನ್ನು ಕರೆಯುತ್ತಾರೆ.


#ಕರ್ನಾಟಕದ ಮ್ಯಾಂಚೆಸ್ಟರ್ ಎಂದು ದಾವಣಗೆರೆ ಗೆ ಕರೆಯುತ್ತಾರೆ.

ಕರ್ನಾಟಕದಲ್ಲಿ ಅತಿ ಹೆಚ್ಚು ಕಬ್ಬಿಣದ ನಿಕ್ಷೇಪ ಹೊಂದಿರುವ ಜಿಲ್ಲೆ?
ಬಳ್ಳಾರಿ ಮತ್ತು ಚಿಕ್ಕಮಗಳೂರು


ಅತ್ಯಂತ ಆಳವಾದ ಚಿನ್ನದ ಗಣಿ - ಕರ್ನಾಟಕದ ಚಾಂಪಿಯನ್ ರಿಫೆ

ಪ್ರಸ್ತುತ ಭಾರತದ ಅತಿದೊಡ್ಡ ಚಿನ್ನದ ಗಣಿ - ಹಟ್ಟಿ
( ರಾಯಚೂರು)

ರಾಷ್ಟ್ರೀಯ ಹೆದ್ದಾರಿ ಹೊಂದದ ಕರ್ನಾಟಕದ ಜಿಲ್ಲೆಗಳು
ರಾಯಚೂರು ಮತ್ತು ಕೊಡಗು

#ಕರ್ನಾಟಕದಲ್ಲಿ ಹಾಯ್ದು ಹೋಗುವ ಅತಿ ಉದ್ದವಾದ ರಾಷ್ಟ್ರೀಯ ಹೆದ್ದಾರಿ?

NH-13
ಇದು ಮಂಗಳೂರ ಇಂದ ಮೂಡಬಿದರಿ, ಕೊಪ್ಪಳ ,ಶಿವಮೊಗ್ಗ,  ಚಿತ್ರದುರ್ಗ, ಹೊಸಪೇಟೆ, ಇಳಕಲು,ಬಿಜಾಪುರ ಮಾರ್ಗವಾಗಿ ಸೋಲಾಪುರಕ್ಕೆ ಸೇರುತ್ತದೆ


ಕರ್ನಾಟಕದಲ್ಲಿ ಮೊದಲು ರೈಲು ಆರಂಭ :
1864

ಕೊಡಗು ಕರ್ನಾಟಕದ ರೈಲು ಮಾರ್ಗ ಇಲ್ಲದ ಜಿಲ್ಲೆ 

amasiddatakali
# ನಮ್ಮ ಮೆಟ್ರೊ ಕಾರ್ಯರಂಭ ಮಾಡಿದ್ದು?
2011 Oct 20 ಬೈಯಪ್ಪನಹಳ್ಳಿ - ಎಮ್.ಜಿ.ರೊಡ


#ಕಾರವಾರ ಬಂದರನ್ನು ಅತಿ ಸುಂದರ ಬಂದರು ಎಂದು ಕರೆಯುತ್ತಾರೆ


#ಅರಮನೆಗಳ ನಗರ ಎಂದು ಮೈಸೂರು ನ್ನು ಕರೆಯುತ್ತಾರೆ.

ಕರ್ನಾಟಕ ರಾಷ್ಟ್ರೀಯ ಉದ್ಯಾನವನಗಳು

ರಾಜೀವಗಾಂಧಿ ರಾ.ಉ- ಕೊಡಗು
ಬಂಡಿಪುರ ರಾ.ಉ--- ಚಾಮರಾಜನಗರ
ಬನ್ನೇರುಘಟ್ಟ ರಾ.ಉ- ಬೆಂಗಳೂರು
ಕುದುರಮುಖ ರಾ.ಉ-- ಚಿಕ್ಕಮಗಳೂರ
ಅಂಶಿ/ಅಣಸಿ ರಾ.ಉ-- ಉತ್ತರ ಕನ್ನಡ

✏ ಭಾರತದ ಸಿಲಿಕಾನ್ ಸಿಟಿ- ಬೆಂಗಳೂರು

ಶಿವಮೊಗ್ಗ ಅತಿ ಹೆಚ್ಚು ಕರೆ ನೀರಾವರಿ ಹೊಂದಿರುವ ಜಿಲ್ಲೆ.

***************
ಧನ್ಯವಾದಗಳು
*ಎಗ್ಸಾಂ ಟಿಪ್ಸ್‌: ಲಿಖಿತ ಪರೀಕ್ಷೆಗೆ ತಯಾರಿ ಹೇಗೆ*

jnanavahinigk@gmail.com

 ಸರಕಾರಿ ಅಥವಾ ಖಾಸಗಿ ಸಂಸ್ಥೆಗಳು ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಲಿಖಿತ ಪರೀಕ್ಷೆಯನ್ನು ನಡೆಸುತ್ತವೆ. ಇಂತಹ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ಪರಿಪೂರ್ಣವಾದ ಸಿದ್ಧತೆ ನಡೆಸಬೇಕಾಗುತ್ತದೆ. ಕಾಂಪಿಟೀಷನ್‌ ಎಗ್ಸಾಂಗೆ ಯಾವ ರೀತಿ ತಯಾರಿ ನಡೆಸಬೇಕು? ಇಲ್ಲೊಂದಿಷ್ಟು ಮಾಹಿತಿಯಿದೆ. ಉದ್ಯೋಗ ಮಾರುಕಟ್ಟೆಯಲ್ಲೀಗ ಸ್ಪರ್ಧೆ ಹೆಚ್ಚಿದೆ. ಯಾವುದೇ ಜಾಬ್‌ ನೋಟಿಫಿಕೇಷನ್‌ ಪ್ರಕಟವಾಗಲಿ. ಇರುವುದು ಕೆಲವೇ ಹುದ್ದೆಗಳಾಗಿದ್ದರೂ ಸಾವಿರ, ಲಕ್ಷ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಸರಕಾರಿ ನೌಕರಿಗಿರುವ ಸೆಳೆತ ಅಂತಹದ್ದು. ಗವನ್ಮೆಂಟ್‌ ಜಾಬ್‌ ಸಿಕ್ಕರೆ ಜೀವನಪೂರ್ತಿ ಸುಖವಾಗಿರಬಹುದು ಎಂಬ ಕನಸು ಎಲ್ಲರಿಗೂ ಇರುತ್ತದೆ. ಇಂತಹ ಎಗ್ಸಾಂಗಳಲ್ಲಿ ಬಹುತೇಕ ಅಭ್ಯರ್ಥಿಗಳು ಯಾವುದೇ ತಯಾರಿ ನಡೆಸದೆ ಪರೀಕ್ಷೆ ಬರೆದು ಅದೃಷ್ಟ ಪರೀಕ್ಷಿಸುತ್ತಾರೆ. ಅದರ, ಬದಲಾಗಿ ಈ ಕೆಳಗೆ ತಿಳಿಸಿದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪರಿಶ್ರಮ ಪಟ್ಟರೆ ಯಶಸ್ಸು ನಿಮ್ಮದಾಗಬಹುದು. ಅಧ್ಯಯನ ಸರಕು: ಅಭ್ಯರ್ಥಿಗಳು ಇತ್ತೀಚಿನ ಮತ್ತು ಪರಿಷ್ಕೃತ ಅಧ್ಯಯನ ಸಾಮಾಗ್ರಿಗಳನ್ನು ಸಂಗ್ರಹಿಸಿ ತಯಾರಿ ನಡೆಸಬೇಕು. ಅಂದರೆ, ಅಧ್ಯಯನ ನಡೆಸುವ ಮಾಹಿತಿಗಳು ಈಗಿನ ಪರೀಕ್ಷಾ ರೀತಿ ಮತ್ತು ಸಿಲೆಬಸ್‌ಗೆ ಹೊಂದಿಕೊಳ್ಳುವಂತೆ ಇರಬೇಕು. ಎಗ್ಸಾಂ ಗೈಡ್‌: ಪ್ರತಿಯೊಂದು ಪರೀಕ್ಷೆಗಳು ಸಹ ವಿಶೇಷ ವಿಧಾನಗಳನ್ನು ಒಳಗೊಂಡಿರುತ್ತವೆ. ಅಂದರೆ, ಅವುಗಳಲ್ಲಿ ನೀಡಲಾಗುವ ಪ್ರಶ್ನೆಗಳ ಸಂಖ್ಯೆ, ಪ್ರಶ್ನೆಗಳ ರೀತಿ, ಪರೀಕ್ಷಾ ಅವಧಿ, ನೆಗೆಟಿವ್‌ ಮಾರ್ಕ್ಸ್‌ ಇತ್ಯಾದಿಗಳು ಇರುತ್ತವೆ. ಇವೆಲ್ಲವನ್ನು ತಿಳಿದುಕೊಂಡು ಇದಕ್ಕೆ ತಕ್ಕಂತೆ ಅಧ್ಯಯನ ನಡೆಸಬೇಕು. ಇದಕ್ಕಾಗಿ ನಿಮಗೆ ಎಗ್ಸಾಂ ಗೈಡ್‌ಗಳು ಉಪಯುಕ್ತ. ಗೈಡ್‌ಗಳನ್ನು ನೋಡಿಕೊಂಡು ನಿಗದಿತ ಸಮಯದೊಳಗೆ ಸಮರ್ಪಕ ಉತ್ತರ ಬರೆಯುವ ಸಾಮರ್ಥ್ಯ‌ವನ್ನು ಪರಿಶೀಲಿಸಿಕೊಳ್ಳಬಹುದು. ಕಾಂಪಿಟಿಷನ್‌ ವಿಕೆಯಲ್ಲಿ ಪ್ರಕಟವಾಗುವ ಮಾರ್ಗದರ್ಶನಗಳು ದಿಕ್ಸೂಚಿಯಾಗಬಲ್ಲದು. ಟೈಂ ಟೇಬಲ್‌: ಬದುಕಿನಲ್ಲಿ ಶಿಸ್ತು ಇದ್ದರೆ ಗೆಲುವು ನಿಶ್ಚಿತ. ನೀವು ದಿನದಲ್ಲಿ ಎಷ್ಟು ಗಂಟೆ ಅಧ್ಯಯನ ಮಾಡಬೇಕೆಂದು ಟೈಂಟೇಬಲ್‌ ರಚಿಸಿಕೊಳ್ಳಿ. ದಿನದಲ್ಲಿ ಇಷ್ಟು ಗಂಟೆ ಎಗ್ಸಾಂ ತಯಾರಿಗೆ ಎಂದು ಮೀಸಲಿಟ್ಟು ಶ್ರದ್ಧೆಯಿಂದ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ರಿವಿಜನ್‌ ಮಾಡಿ: ಓದಿದ ವಿಚಾರಗಳನ್ನು ಮೆಲುಕು ಹಾಕುವ ಅಭ್ಯಾಸ ಇರಲಿ. ಅಂದರೆ, ಇಸವಿಗಳು, ಫಾರ್ಮುಲಾಗಳು, ವ್ಯಾಖ್ಯಾನಗಳನ್ನು ಆಗಾಗ ನೆನಪಿಸುತ್ತ ಇರಿ. ಹಗಲುಕನಸನ್ನು ಪಕ್ಕಕ್ಕೆ ಇರಿಸಿ ಸಮಯ ಸಿಕ್ಕಾಗಲೆಲ್ಲ ಓದಿದ ವಿಚಾರಗಳನ್ನು ನೆನಪಿಸಿಕೊಳ್ಳುತ್ತ ಇರಿ. ನೋಟ್ಸ್‌ ಬರೆದಿಟ್ಟುಕೊಳ್ಳುವುದು: ಓದುವಾಗ ಅತ್ಯಮೂಲ್ಯ ಅನಿಸಿದ ಅಂಶಗಳನ್ನು ನೋಟ್ಸ್‌ನಲ್ಲಿ ಬರೆದಿಟ್ಟುಕೊಳ್ಳಿ. ಮರೆತು ಹೋಗಬಹುದಾದ ಸಂಗತಿಗಳನ್ನು ಹೀಗೆ ಬರೆದಿಟ್ಟರೆ ಆಗಾಗ ಓದಿಕೊಳ್ಳಬಹುದು. ಪರೀಕ್ಷೆಗೆ ಕೆಲವು ದಿನಗಳಿರುವಾಗ ಇಂತಹ ನೋಟ್ಸ್‌ ಮೇಲೆ ಕಣ್ಣಾಡಿಸುತ್ತಿದ್ದರೆ ಸಾಕು. ತಜ್ಞರಿಂದ ಮಾಹಿತಿ: ನೀವು ಏಕಲವ್ಯನಂತೆ ಸಾಧನೆ ಮಾಡಬಹುದು ಅಥವಾ ಕಾಂಪಿಟೀಟಿವ್‌ ಎಗ್ಸಾಂನಲ್ಲಿ ಪರಿಣತಿ ಪಡೆದ ತಜ್ಞರಿಂದ ತರಬೇತಿ ಪಡೆಯಬಹುದು. ತಜ್ಞರ ಮಾರ್ಗದರ್ಶನವಿದ್ದರೆ ಪರೀಕ್ಷೆ ಬರೆಯುವ ಟೆಕ್ನಿಕ್‌ ತಿಳಿಯುತ್ತದೆ. ಪತ್ರಿಕೆಗಳನ್ನು ಓದಿ: ದಿನನಿತ್ಯ ಹಲವಾರು ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಿ. ಈ ಮಾಹಿತಿಯನ್ನು ಪರೀಕ್ಷೆಯಲ್ಲಿ ಕೇಳಬಹುದೇ ಎಂದು ಯೋಚಿಸುತ್ತ ಪತ್ರಿಕೆಗಳನ್ನು ಓದಿರಿ. ದಿನಪತ್ರಿಕೆಗಳಲ್ಲಿ ಪ್ರಮುಖವೆನಿಸುವ ಮಾಹಿತಿಗಳನ್ನು ನೋಟ್‌ ಮಾಡಿಟ್ಟುಕೊಳ್ಳಿ. ಅಂದರೆ, ಪ್ರಮುಖರ ನೇಮಕ, ಪ್ರಮುಖ ಒಪ್ಪಂದಗಳು, ಅಂತಾರಾಷ್ಟ್ರೀಯ ಸಂಬಂಧ ಸೇರಿದಂತೆ ಪ್ರಚಲಿತ ವಿದ್ಯಾಮಾನಗಳ ಮಾಹಿತಿಯನ್ನು ಪಡೆಯುತ್ತಿರಿ. ಹೀಗೆ ಸಂಪೂರ್ಣ ತಯಾರಿ ನಡೆಸಿ ಪರೀಕ್ಷೆ ಬರೆಯಿರಿ. ಪರೀಕ್ಷೆ ಬರೆಯುವಾಗ ಸಮಯದ ನಿರ್ವಹಣೆ ಸಮರ್ಪಕವಾಗಿರಲಿ. ಎಷ್ಟು ಸಾಧ್ಯವೋ ಅಷ್ಟು ಚೆನ್ನಾಗಿ ಪರೀಕ್ಷೆ ಬರೆಯಿರಿ. ನಿಮ್ಮ ಪ್ರಯತ್ನ ಸಂಪೂರ್ಣವಾಗಿ ಮಾಡಿದ ನಂತರ ಫಲಿತಾಂಶವನ್ನು ಅದೃಷ್ಟಕ್ಕೆ ಬಿಡಿ. *ಪಾಸಾದರೆ ಸಂಭ್ರಮಿಸಿ. *ಫೇಲಾದರೆ ಮರಳಿ ಯತ್ನವ ಮಾಡಿ. ಶುಭವಾಗಲಿ*.

ಇನ್ನಷ್ಟು ಟಿಪ್ಸ್ * ಸ್ಮಾರ್ಟ್‌ಫೋನ್‌ನಲ್ಲಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿ ಬಳಸಿ.

 * ಲವಲವಿಕೆಯಿಂದ ಇರಿ. ಸಮರ್ಪಕ ಆಹಾರ ಮತ್ತು ನಿಯಮಿತ ವ್ಯಾಯಾಮದಿಂದ ಆರೋಗ್ಯ ಕಾಪಾಡಿಕೊಳ್ಳಿ.

* ದಿನನಿತ್ಯ ಹಲವಾರು ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಿ.

 * ಓದುವಾಗ ಅತ್ಯಮೂಲ್ಯ ಅನಿಸಿದ ಅಂಶಗಳನ್ನು ನೋಟ್ಸ್‌ನಲ್ಲಿ ಬರೆದಿಟ್ಟುಕೊಳ್ಳಿ.

welcome

Welcome to Jnanavahini GK blog

ಗವರ್ನರ್‌ ಜನರಲ್‌ ಮತ್ತು ವೈಸರಾಯ್ ರಗಳ ಬಗ್ಗೆ

*ಗೌರ್ನರ್ ಜನರಗಳ ಬಗ್ಗೆ ಮತ್ತು ವೈಸರಾಯ್ ರ ಬಗ್ಗೆ ವಿಶೇಷತೆ* 📲ರಾಬರ್ಟ್ ಕ್ಲೈವ್ 1765-67 📲ವಾರನ್ ಹೇಸ್ಟಿಂಗ್ಸ್ 1767-85 📲ಕಾರನ್ ವಾಲಿಸ್ 1785-93 📲ಸರ್ ...